ನವದೆಹಲಿ: ಕರೊನಾ ವೈರಸ್ ವಿಶ್ವವ್ಯಾಪಿಯಾಗಿ ಹರಡಲಾರಂಭಿಸಿದೆ. ದೇಶದಲ್ಲಿ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಜನರು ಭಯಭೀತರಾಗಿದ್ದಾರೆ. ಜನರು ಭಯ ಪಡುವ ಅವಶ್ಯಕತೆ ಇಲ್ಲ ಬದಲಾಗಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಎಂದು ತಿಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಮಾಸ್ಕ್ಗಳನ್ನು ಯಾರು ಹಾಕಿಕೊಳ್ಳಬೇಕು ಮತ್ತು ಹೇಗೆ ಹಾಕಿಕೊಳ್ಳಬೇಕು ಎನ್ನುವುದರ ಕುರಿತಾಗಿ ಮಾರ್ಗದರ್ಶನವನ್ನು ನೀಡಿದೆ.
ಮಾರ್ಗದರ್ಶನದಲ್ಲಿ ಸೂಚಿಸಿರುವ ಪ್ರಕಾರ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಅಗತ್ಯತೆ ಇಲ್ಲ. ನಿಮ್ಮಲ್ಲಿ ರೋಗ ಲಕ್ಷಣಗಳು ಇದ್ದರೆ, ನೀವು ರೋಗಿಗಳನ್ನು ಹತ್ತಿರದಿಂದ ನೋಡಿಕೊಳ್ಳುತ್ತಿದ್ದೀರೋ, ನಿಮ್ಮ ಅಕ್ಕ ಪಕ್ಕದವರ ಮನೆಯಲ್ಲಿ ಸೋಂಕಿತರು ಅಥವಾ ಶಂಕಿತರು ಇದ್ದರೆ ಮತ್ತು ನೀವು ವೈದ್ಯಕೀಯ ಇಲಾಖೆಯ ಸೇವೆಯಲ್ಲಿದ್ದರೆ ಮಾಸ್ಕ್ ಧರಿಸುವುದು ಅತ್ಯಗತ್ಯ ಎಂದು ಮಾರ್ಗದರ್ಶಿ ತಿಳಿಸಿದೆ.
ಮಾಸ್ಕ್ ಧರಿಸುವವರು ತಾವು ಧರಿಸುವ ಮಾಸ್ಕ್ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವಾಗ ಈ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.