ಶಿವಮೊಗ್ಗ ಸಮೀಪದ ಗಾಜನೂರು ಶರಣ್ಯ ಆರೈಕೆ ಕೇಂದ್ರದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿದರು. ರಮೇಶ್, ಡಿ.ಎಲ್.ಮಂಜುನಾಥ್, ಡಾ. ಎಲ್.ಕೆ.ಶ್ರೀಪತಿ, ಶಿಲ್ಪಾ ಇತರರಿದ್ದರು.  
ನ್ಯೂಸ್

ಪ್ರಾಕೃತಿಕ ಅಸಮತೋಲನದಿಂದ ಸಂಕಷ್ಟ ಗ್ಯಾರಂಟಿ

ಶಿವಮೊಗ್ಗ: ಗಿಡಮರಗಳ ನಾಶದಿಂದ ಪರಿಸರ ಅಸಮತೋಲನ ಹೆಚ್ಚುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಸಮುದ್ರ ಮಟ್ಟ ಏರಿಕೆಯಾಗಿ ಅನೇಕ ದ್ವೀಪ ರಾಷ್ಟ್ರಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಗಾಜನೂರಿನ ಶರಣ್ಯ ಆರೈಕೆ ಕೇಂದ್ರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಪರ್ಯಾವರಣ ಟ್ರಸ್ಟ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಎನ್‌ಇಎಸ್ ಬಿ.ಇಡಿ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ವೃಕ್ಷಾರೋಪಣ ಮತ್ತು ಕೆರೆ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.

ಈಗ ಪರಿಸರಕ್ಕೆ ಸಾವು-ಬದುಕಿನ ಪ್ರಶ್ನೆ ಎದುರಾಗಿದೆ. ಈ ಹಿಂದೆ ಸಮಯಕ್ಕೆ ಸರಿಯಾಗಿ ಮಳೆ, ಫಸಲು ಬರುತ್ತಿತ್ತು. ರೈತರಿಗೆ ಕೃಷಿಯ ಸಂಪೂರ್ಣ ಜ್ಞಾನವಿತ್ತು. ಪರಿಸರ ನಾಶದಿಂದ ಎಲ್ಲವೂ ಬದಲಾಗಿವೆ ಎಂದರು.

ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶರಣ್ಯ ಸಂಸ್ಥೆ ಉಪಾಧ್ಯಕ್ಷ ಡಿ.ಎಲ್.ಮಂಜುನಾಥ್, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ರಮೇಶ್, ಉಪ ಪ್ರಾದೇಶಿಕ ಅಧಿಕಾರಿ ಶಿಲ್ಪಾ, ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ, ಪ್ರಮುಖರಾದ ಮಂಜುನಾಥ್, ತ್ಯಾಗರಾಜ್ ಮಿತ್ಯಾಂತ, ಬಾಲಕೃಷ್ಣ ನಾಯ್ಡು, ದಿನೇಶ್ ಇತರರಿದ್ದರು.