ಇಲ್ಲಿನ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಪ್ರಶಂಸೆ
ಜಿಲ್ಲಾ ಮಟ್ಟದಲ್ಲಿ ನಡೆದ ಸಭೆಯಲ್ಲಿ ಚನ್ನಗಿರಿ ತಾಲೂಕು ಐದು ಯೋಜನೆಗಳ ವಿತರಣೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತವಾಗಿದೆ. ಮುಂದಿನ ದಿನದಲ್ಲಿ ಅಧಿಕಾರಿಗಳು ಸಮಿತಿಯ ಜತೆ ಕೈಜೋಡಿಸಿ ಅಭಿವೃದ್ಧಿ ಮಾಡಬೇಕಿದೆ ಎಂದರು.
ಪಡಿತರ ವಿತರಣೆಯಲ್ಲಿ ಸೂಚನೆಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿರುವ 36 ಫಲಾನುಭವಿಗಳ ಖಾತೆಗೆ ₹3.46 ಲಕ್ಷ ಸರ್ಕಾರದಿಂದ ಹಣ ಸಂದಾಯವಾಗಿದೆ. ತಾಲೂಕಿನಲ್ಲಿ ಒಟ್ಟು 1,020 ಜನರು ಮರಣ ಹೊಂದಿದ್ದಾರೆ. ಮರಣ ಹೊಂದಿದವರ ಹೆಸರಿನಲ್ಲಿ ಹಣ ಪಡೆದವರಿಂದ ಅದನ್ನು ವಾಪಸ್ ಪಡೆದು ಸರ್ಕಾರಕ್ಕೆ ಜಮೆಮಾಡಬೇಕು. ಮರಣ ಹೊಂದಿದವರ ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತರು ಮಾಡಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ಒಟ್ಟು 79,223 ಫಲಾನುಭವಿಗಳಿದ್ದು, ಅದರಲ್ಲಿ 77,172 ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ.
ಬಡವರ ಕಾರ್ಡ್ ನಿಲ್ಲಿಸಬೇಡಿ
ಬಡವರು ಮನೆಕಟ್ಟಲು ಸಾಲ ಪಡೆಯುವ ಸಲುವಾಗಿ ಟ್ಯಾಕ್ಸ್ ಫೈಲ್ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರ ಗೃಹಲಕ್ಷ್ಮಿ ಕಾರ್ಡ್ ನಿಲ್ಲಿಸಲಾಗಿದೆ. ಇದರಿಂದ ಅವರಿಗೆ ಸಿಗುವ ₹2 ಸಾವಿರ ಸಿಗುತ್ತಿಲ್ಲ. ಅಂಥವರ ಮನೆಗೆ ಹೋಗಿ ನಿಜವಾದ ಫಲಾನುಭವಿ ಇದ್ದರೆ ಕಾರ್ಡ್ ಉಳಿಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಎಸ್‌ಆರ್‌ಟಿಸಿ ಡಿಪೋ ಅಗತ್ಯ
ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆದರೆ ಗ್ರಾಮೀಣ ಭಾಗದ ಜನರಿಗೆ ಬಸ್ ಸೌಕರ್ಯ ಸುಲಭವಾಗಿ ಸಿಗುತ್ತದೆ. ಬಸ್ ವ್ಯವಸ್ಥೆ ಕುರಿತು ದೂರುಗಳು ಬರುತ್ತಿದ್ದು, ಅಧಿಕಾರಿಗಳು ಸರಿಯಾದ ಮಾರ್ಗಗಳನ್ನು ತಿಳಿದು ಸೂಕ್ತ ಬಸ್ ವ್ಯವಸ್ಥೆ ಮಾಡಬೇಕು ಎಂದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜಬೀವುಲ್ಲಾ, ಸದಸ್ಯರಾದ ಶಿವಣ್ಣ, ಮಧು, ಚಂದ್ರಪ್ಪ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್. ಪ್ರಕಾಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.