ಬೆಂಗಳೂರು: ವೃತ್ತಿಪರ ತರಬೇತಿಯಲ್ಲಿ ಭಾರತ-ಆಫ್ರಿಕಾ ಸಹಕಾರ ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ರಾಜ್ಯದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ವು ನಮೀಬಿಯಾದಲ್ಲಿ ಶೀಘ್ರವೇ ಸ್ಥಾಪನೆಯಾಗಲಿದೆ.
ಜಿಟಿಟಿಸಿಯನ್ನು ಪ್ರಮುಖ ಜ್ಞಾನ ಮತ್ತು ತಂತ್ರಜ್ಞಾನ ಪಾಲುದಾರ ಸಂಸ್ಥೆಯಾಗಿ ಮಾಡಿಕೊಳ್ಳಲು ಆಫ್ರಿಕಾ-ಇಂಡಿಯಾ ಎಕನಾಮಿಕ್ ೌಂಡೇಷನ್ ಮುಂದೆ ಬಂದಿದೆ. ಈ ದಿಸೆಯಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ಆಫ್ರಿಕಾ ನಿಯೋಗ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿತು.
ನಮೀಬಿಯಾದಲ್ಲಿ ಜಿಟಿಟಿಸಿ ಸ್ಥಾಪಿಸಬೇಕೆಂಬ ಪ್ರಸ್ತಾವನೆಯು ಸ್ವಾಗತಾರ್ಹವಾಗಿದೆ. ಕರ್ನಾಟಕವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿಸುತ್ತದೆ. ಉಪಕರಣ ತಯಾರಿಕೆ ಮತ್ತು ಉತ್ಪಾದನಾ ಕೌಶಲ್ಯಗಳಲ್ಲಿ ಜಿಟಿಟಿಸಿ ಪರಿಣತಿಯು ಜಾಗತಿಕ ಸೃಷ್ಟಿಸಲು ಸಜ್ಜಾಗಿದೆ ಎಂದು ಶರಣಪ್ರಕಾಶ್ ಪಾಟೀಲ ಹೇಳಿದ್ದಾರೆ.
ಆಫ್ರಿಕಾದ ಕೈಗಾರಿಕಾ ತರಬೇತಿ ಅಗತ್ಯಗಳಿಗೆ ದೃಢವಾದ ಮಾದರಿಯಾಗಿ ಕಾರ್ಯನಿರ್ವಹಿಸಲು ಜಿಟಿಟಿಸಿ ಶಕ್ತವಾಗಿದ್ದು, ರಾಜ್ಯದಲ್ಲಿ 20ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಸಾವಿರಾರು ಜನರಿಗೆ ನಿಖರ ಉಪಕರಣಗಳು, ಸಿಎನ್‌ಸಿ ಕಾರ್ಯಾಚರಣೆಗಳು, ಮೆಕಾಟ್ರಾನಿಕ್ಸ್ ಮತ್ತು ರೋಬೋಟಿಕ್ಸ್ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಎಐಇಎ್ ಪ್ರಧಾನ ಕಾರ್ಯದರ್ಶಿ ಅನಿಲ್ ಸಿಂಧೆ ಮಾತನಾಡಿ ಐದು ಲಕ್ಷಕ್ಕೂ ಹೆಚ್ಚು ಕೌಶಲ್ಯಪೂರ್ಣ ವೃತ್ತಿಪರರನ್ನು ಜಿಟಿಟಿಸಿ ಈಗಾಗಲೇ ಪರಿಚಯಿಸಿದೆ. ಇದರ ಕಾರ್ಯಾಚರಣೆಯು ಆಫ್ರಿಕಾದ ಸಂದರ್ಭಗಳಿಗೆ ಸರಾಗವಾಗಿ ಅಳವಡಿಸಿಕೊಳ್ಳಲು ಸಾಧ್ಯವಿದೆ ಎಂದರು.
ಭಾರತ ಮತ್ತು 54 ಆಫ್ರಿಕನ್ ರಾಷ್ಟ್ರ ನಡುವೆ ಜ್ಞಾನ, ತಂತ್ರಜ್ಞಾನ, ವ್ಯಾಪಾರ ಮತ್ತು ಹೂಡಿಕೆಯ ಕಾರ್ಯತಂತ್ರದ ಏಕೀಕರಣ ಉತ್ತೇಜಿಸಲು ಎಐಇಎ್ ರಚಿಸಿದೆ. ಈ ವೇದಿಕೆಯ ಉಪಕ್ರಮಗಳಿಗೆ ಆಫ್ರಿಕನ್ ಒಕ್ಕೂಟದಿಂದ ಅನುಮೋದನೆ ಲಭಿಸಿದೆ.
ಈಗಾಗಲೇ ಜಾಂಜಿಬಾರ್‌ನಲ್ಲಿ ಐಐಟಿ ಮದ್ರಾಸ್ ಕ್ಯಾಂಪಸ್ ಸ್ಥಾಪನೆಯಾಗಿದೆ. ಇದು ಆಫ್ರಿಕಾದ್ಯಂತ ಶಿಕ್ಷಣ ಮತ್ತು ಕೌಶಲ್ಯದಲ್ಲಿ ದೀರ್ಘಕಾಲಿನ ಸಹಯೋಗದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಿಂಧೆ ವಿವರಿಸಿದರು.
ಎಐಇಎ್ ಜಂಟಿ ಕಾರ್ಯದರ್ಶಿ ಕಾಂಚನವೇಲು ಮಾತನಾಡಿ ನಮೀಬಿಯಾವು ಕೈಗಾರಿಕೆ, ಇಂಧನ, ಕೃಷಿ ವ್ಯವಹಾರ, ಲಾಜಿಸ್ಟಿಕ್ಸ್ ಮತ್ತು ಪ್ರವಾಸೋದ್ಯಮದಂತ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ರಾಜಕೀಯ ಸ್ಥಿರತೆಯು ಇಲ್ಲಿ ಆರಂಭಿಸುತ್ತಿರುವ ಯೋಜನೆಗಳಿಗೆ ಸಹಕಾರಿಯಾಗಿದೆ ಎಂದರು.
ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ವೈ.ಕೆ.ದಿನೇಶ್ ಕುಮಾರ್ ತರಬೇತಿ ಮತ್ತು ಶಿಕ್ಷಣ ರಾಜತಾಂತ್ರಿಕತೆ ಮೂಲಕ ಕರ್ನಾಟಕದ ಶಕ್ತಿಯನ್ನು ಸಬಲೀಕರಣಗೊಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.