ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ಕಡಿತ ಮತ್ತು ಸರಳೀಕರಣದ ಘೋಷಣೆ ಸ್ವಾಗತಾರ್ಹ. ಇದರಿಂದ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿ ತೆರಿಗೆ ಬಂದು 5 ವರ್ಷ ತುಂಬಿದೆ. ಸರಳೀಕರಣದಿಂದ ಸಣ್ಣ ವ್ಯಾಪಾರಸ್ಥರಿಗೆ, ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ೋಷಣೆ ಮಾಡಿದ್ದಾರೆ. ಐದು ವರ್ಷದ ಅನುಭವದಲ್ಲಿ ಕೆಲವು ಬದಲಾವಣೆ ಬಯಸಿ, ರೈತರು, ಸಣ್ಣ ವ್ಯಾಪಾರಸ್ಥರು, ದೊಡ್ಡ ವ್ಯಾಪಾರಸ್ಥರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ತೆರಿಗೆಯ ಸ್ಲ್ಯಾಬ್ ಕಡಿಮೆ ಮಾಡಬೇಕು ಮತ್ತು ಕೆಲವು ವಸ್ತುಗಳ ತೆರಿಗೆ ಕಡಿಮೆ ಮಾಡಲು ನಿರ್ಧರಿಸಿದೆ.
ಈ ತೀರ್ಮಾನಕ್ಕಾಗಿ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಗ್ರೂಪ್ ಆ್ ಮಿನಿಸ್ಟರ್ಸ್ ಒಂದೂವರೆ ವರ್ಷ ಅಧ್ಯಯನ ನಡೆಸಿ ಹಲವು ಸರಳೀಕರಣ ಮತ್ತು ವರ್ಗೀಕರಣ ಮಾಡಿ ವರದಿ ನೀಡಲಾಗಿದೆ. ಬಹಳಷ್ಟು ದಿನಬಳಕೆ ವಸ್ತುಗಳನ್ನು ಕಡಿಮೆ ಸ್ಲ್ಯಾಬ್‌ನಲ್ಲಿ ಹಾಕುವ ನಿರ್ಧಾರಕ್ಕೆ ಬರಲಾಗಿದೆ. ವ್ಯಾಪಾರಸ್ಥರಿಗೆ ಮತ್ತು ಖರೀದಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸಲಹೆ ಸೂಚನೆಗಳನ್ನು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡಲಾಗಿದೆ ಎಂದರು.
ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಒಪ್ಪಿರುವ ಕೆಲವು ತಿದ್ದುಪಡಿಗಳನ್ನು ತರಬೇಕೆಂದು ಕೇಂದ್ರ ಸರ್ಕಾರದ ತೀರ್ಮಾನವನ್ನು ಕೆಂಪು ಕೋಟೆಯಿಂದ ಪ್ರಧಾನಿ ಮೋದಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ತೆರಿಗೆಯ ಸರಳೀಕರಣ ಮಹತ್ವದ ಹೆಜ್ಜೆ ಘೋಷಣೆ ಮಾಡಿದ್ದಾರೆ. ಇದೊಂದು ದೀಪಾವಳಿಗೆ ನರೇಂದ್ರ ಮೋದಿ ಮಾಡುತ್ತಿರುವ ಕೊಡುಗೆಯಾಗಿದೆ. ರಾಷ್ಟ್ರವೇ ಸ್ವಾಗತ ಮಾಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.