ನ್ಯೂಸ್

ಪಾದರಕ್ಷೆ, ಬಟ್ಟೆಗಳ ಮೇಲಿನ GST ಶೇ.5ಕ್ಕೆ ಇಳಿಕೆ!

GST: 2,500 ರೂ.ಬೆಲೆ ಹೊಂದಿರುವ ಪಾದರಕ್ಷೆಗಳು ಮತ್ತು ಉಡುಪುಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.5ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಪ್ರಸ್ತುತ, 1,000ರೂ. ವರೆಗಿನ ಬೆಲೆಯ ಪಾದರಕ್ಷೆಗಳು ಮತ್ತು ಉಡುಪುಗಳಿಗೆ ಶೇ.5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.ಅಲ್ಲದೆ, ಶೇ.12ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, 5 ಪ್ರತಿಶತ ಸ್ಲ್ಯಾಬ್‌ನಲ್ಲಿರುವ ಪಾದರಕ್ಷೆಗಳು ಮತ್ತು ಉಡುಪುಗಳ ಮಿತಿಯನ್ನು1,000 ರೂ ರಿಂದ 2,500 ರೂ.ಗೆ ಹೆಚ್ಚಿಸಲು ನಿರ್ಧರಿಸಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)