ಭಾರತದ ಅರ್ಥವ್ಯವಸ್ಥೆಗೆ ಸುಭದ್ರ ಬುನಾದಿ ಹಾಕಿಕೊಟ್ಟ ಜಿಎಸ್ಟಿ ಇದೀಗ ಒಂಬತ್ತನೇ ಹಣಕಾಸು ವರ್ಷ ಪ್ರವೇಶಿಸಿದೆ. ಭಾರತ ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯ ಹೊಸ್ತಿಲಲ್ಲಿರುವಾಗ ‘ಸರ್ವೆ ಜನಾಃ ಸುಖಿನೋ ಭವಂತು, ಸರ್ವೆ ಸಂತು ನಿರಾಮಯಾಃ’ ಎನ್ನುವುದಕ್ಕೆ ಅನ್ವರ್ಥಕವಾಗಿ ಹೊಸ ಸ್ವರೂಪ ಪಡೆದುಕೊಂಡಿದೆ. ನಾಡಹಬ್ಬ ‘ನವರಾತ್ರಿ’ಗೆ ನರೇಂದ್ರ ಮೋದಿಯವರು ‘ಜನೋಪಯೋಗಿ ಜಿಎಸ್ಟಿ -2’ಯನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
ಎನ್ಡಿಎ ಮೂರನೇ ಅವಧಿ ಆಡಳಿತದಲ್ಲೂ ಜನಸಾಮಾನ್ಯರ ಜೀವನಮಟ್ಟ ಸುಲಭಗೊಳಿಸುವ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ‘ಘಉಗಿಖ ಎಉಘ ಎಖಖ’ಯೇ ಇದಕ್ಕೆ ಸಾಕ್ಷಿ. ಭವಿಷ್ಯದ ಪೀಳಿಗೆಗೆ (ಘಛ್ಡಿಠಿ ಎಛ್ಞಿ) ವರದಾನ ಎನ್ನುವಂತೆ ಸರಳ-ಸುಲಭ ಜಿಎಸ್ಟಿ-2 ತೆರಿಗೆ ವ್ಯವಸ್ಥೆಯನ್ನು ಸಾಕಾರಗೊಳಿಸಲು ಶ್ರೀಕಾರ ಹಾಡಿದೆ. ದಿನಬಳಕೆಯ ಶೇಕಡ 99ರಷ್ಟು ವಸ್ತುಗಳನ್ನು ಶೂನ್ಯ ಮತ್ತು ಶೇ.5ರ ತೆರಿಗೆ ದರ ವ್ಯಾಪ್ತಿಗೆ ತರಲಾಗಿದೆ. ಜೀವನ ಭದ್ರತೆಯ ವಿಮೆ ಸೇರಿದಂತೆ ದಿನೋಪಯೋಗಿ ಶಾಂಪೂ, ಸಾಬೂನು, ವಾಷಿಂಗ್ ಪೌಡರ್ ಹೀಗೆ ಸಾಕಷ್ಟು ವಸ್ತುಗಳು ಶೂನ್ಯ ಮತ್ತು ಅಗ್ಗದ ಶೇ.5ರ ಕರ ವ್ಯಾಪ್ತಿಗೆ ಒಳಪಟ್ಟಿವೆ. ‘ಒಂದು ರಾಷ್ಟ್ರ-ಒಂದು ತೆರಿಗೆ’ ಪರಿಕಲ್ಪನೆಯಲ್ಲಿ 2017ರ ಜುಲೈ 1ರಿಂದ ಜಾರಿಗೊಂಡ ಜಿಎಸ್ಟಿ ದೇಶದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಆರ್ಥಿಕ ತಳಮಟ್ಟದಲ್ಲಿದ್ದ, ದುರ್ಬಲ ಐದು ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಲ್ಪಡುತ್ತಿದ್ದ ಭಾರತಕ್ಕೆ ಸಕಾಲಿಕವಾಗಿ ಅರ್ಥಚೈತನ್ಯ ತುಂಬಿ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ನಿರೂಪಿಸುವಲ್ಲಿ ತನ್ನದೇ ಆದ ಕೊಡುಗೆ ಜಿಎಸ್ಟಿ ನೀಡಿತು. ಇದೀಗ ಮತ್ತೊಂದು ಹಂತದ ಮೇಲ್ಪಂಕ್ತಿಗೇರುವ ಗುರಿಯೊಂದಿಗೆ ‘ಘಉಗಿಖ ಎಉಘ ಎಖಖ’ ರೂಪಾಂತರ ಆರ್ಥಿಕ ಅಲೆ ಎಬ್ಬಿಸಲಿದೆ.
ವಿಕಸಿತ ಭಾರತಕ್ಕೆ ಪ್ರೇರಣೆ: ಕಳೆದೆಂಟು ವರ್ಷಗಳಿಂದ ಸರಕು-ಸೇವಾ ತೆರಿಗೆ ಭಾರತದ ನಾಗರಿಕತೆ, ಆರ್ಥಿಕತೆ ಜತೆಗೆ ಔದ್ಯಮಿಕವಾಗಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು. ಭವಿಷ್ಯದಲ್ಲಿ ‘ಘಉಗಿಖ ಎಉಘ ಎಖಖ’ ಸಹ ವಿಶೇಷವಾಗಿ ಬಡವರು, ಮಹಿಳೆಯರು, ಯುವಕರು, ಕೃಷಿಕರು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಉತ್ತೇಜನ ನೀಡಲಿದೆ. ಭಾರತೀಯ ನಾಗರಿಕರ ಜೀವನಮಟ್ಟ ಉನ್ನತೀಕರಿಸುವ ಜತೆಗೆ ಪ್ರತಿ ಉತ್ಪನ್ನಗಳ ಬಳಕೆ, ಉದ್ಯಮಗಳ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ. ವ್ಯಾಪಾರ-ವಹಿವಾಟಿನಲ್ಲಿ ಹೂಡಿಕೆ ಹೆಚ್ಚಿಸುತ್ತದೆ. ಸಕಲ ವಲಯಗಳಲ್ಲೂ ಯುವ ಸಮುದಾಯಕ್ಕೆ ಬೃಹತ್ ಉದ್ಯೋಗಾವಕಾಶ ಸೃಷ್ಟಿಸಲಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ‘ವಿಕಸಿತ ಭಾರತ’ ನಿರ್ವಣಕ್ಕೆ ಪ್ರೇರಣೆಯಾಗಲಿದೆ.
ಭಾರತವನ್ನು ನಂ.1 ಆಗಿಸುವ ಮುನ್ನುಡಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಸ್ತರದ ಜಿಎಸ್ಟಿ-2 ಪರಿಚಯಿಸಿದ್ದಾರೆ. ಪ್ರಸ್ತುತ ಶೇ.5, ಶೇ.12, ಶೇ.18 ಮತ್ತು ಶೇ.28ರ ಚತುಸ್ತರದಲ್ಲಿದ್ದ ಜಿಎಸ್ಟಿ ‘ಶೇ.5’ ಮತ್ತು ‘ಶೇ.18’ರ ದ್ವಿಸ್ತರಕ್ಕಿಳಿಸಿ ಜನೋಪಯೋಗಿಯತ್ತ ಕೊಂಡೊಯ್ಯುವಲ್ಲಿ ಮಹತ್ತರ ಹೆಜ್ಜೆಯಿರಿಸಿದ್ದಾರೆ.
ಬೆಲೆಭಾರ ಇಳಿಕೆ: ದ್ವಿಸ್ತರದ ಜಿಎಸ್ಟಿ ಜಾರಿಯಿಂದ ಪ್ರತಿ ಉತ್ಪನ್ನಗಳ ಬೆಲೆಯೂ ಇಳಿಕೆಯಾಗಲಿದೆ. ಪರಿಷ್ಕೃತ ಜಿಎಸ್ಟಿಯಲ್ಲಿ ಶೇ.12ರ ಸ್ಲ್ಯಾಬ್ನಲ್ಲಿದ್ದ ಶೇ.99ರಷ್ಟು ವಸ್ತುಗಳು ಶೇ.5ರ ವ್ಯಾಪ್ತಿಗೆ ಮತ್ತು ಶೇ.28ರ ಸ್ಲ್ಯಾಬ್ನಲ್ಲಿದ ಶೇ.90ರಷ್ಟು ಉತ್ಪನ್ನಗಳು ಶೇ.18ರ ವ್ಯಾಪ್ತಿಗೆ ಬರುವುದರಿಂದ ಶೇ.99ರಷ್ಟು ದಿನಬಳಕೆ, ಅಗತ್ಯ ವಸ್ತುಗಳು ಶೇ.5ರ ಅಥವಾ ಶೇ.0 ಸ್ಲ್ಯಾಬ್ನೊಳಗೆ ಬರಲಿವೆ. ಇದರಿಂದ ಜನಸಾಮಾನ್ಯರಿಗೆ ಉಳಿತಾಯ ಮತ್ತು ಉತ್ಪನ್ನ-ಉದ್ಯಮ, ವಹಿವಾಟು ಹೆಚ್ಚಿಕೆಯಾಗುವ ಎಲ್ಲ ಸಾಧ್ಯತೆ ಇದೀಗ ಸೃಷ್ಟಿ ಆಗಿದೆ.
ಶೂನ್ಯ ತೆರಿಗೆ ದರದಲ್ಲಿ ಆರೋಗ್ಯ-ಆಹಾರೋತ್ಪನ್ನ ವಲಯ: ಹೊಸ ಜಿಎಸ್ಟಿ-2 ಜನಸಾಮಾನ್ಯರ ಜೀವನದ ಮೇಲೆ ಸಕಾರಾತ್ಮಕವಾಗಿ ನೇರ ಪರಿಣಾಮ ಬೀರುತ್ತದೆ. ಹಾಲು, ಹಣ್ಣು, ತರಕಾರಿ, ಬ್ರೆಡ್, ಗೋಧಿಹಿಟ್ಟು, ಖಾದ್ಯತೈಲ, ಸಕ್ಕರೆ, ತಿಂಡಿ- ತಿನಿಸುಗಳು ಅನೇಕಾನೇಕ ಆಹಾರ ಪದಾರ್ಥ- ಆಹಾರ ಧಾನ್ಯಗಳೆಲ್ಲ ಶೂನ್ಯ ತೆರಿಗೆ ದರಕ್ಕೆ ಒಳಪಡಲಿವೆ. 33 ಜೀವರಕ್ಷಕ ಔಷಧಗಳಿಗೂ ಶೂನ್ಯ ತೆರಿಗೆ. ಹೀಗೆ ಆರೋಗ್ಯ-ಆಹಾರೋತ್ಪನ್ನಗಳ ಬೆಲೆ ಅಗ್ಗವಾಗಿ ಪ್ರತಿ ಕುಟುಂಬಗಳ ಮಾಸಿಕ ವೆಚ್ಚದಲ್ಲಿ ಕನಿಷ್ಠ ನಾಲ್ಕು ಪ್ರತಿ ಶತದಷ್ಟು ಉಳಿತಾಯವಾಗಲಿದೆ. ಇದು ಕಡುಬಡವರ ಏಳಿಗೆಗೆ ಹೊಸ ಸ್ಪರ್ಶ ನೀಡುವತ್ತ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಹೆಜ್ಜೆಯಾಗಿದೆ.
ನವೀಕೃತ ಇಂಧನ-ಹಸಿರು ಶಕ್ತಿಗೆ ಉತ್ತೇಜನ: ‘ಜಿಎಸ್ಟಿ-2’ ಪರಿಸರಸ್ನೇಹಿ ಯೋಜನೆಗಳಿಗೆ ಪೂರಕವಾಗಿದೆ. ವಿದ್ಯುತ್ಚಾಲಿತ ವಾಹನಗಳನ್ನು ಶೇ.28ರಿಂದ ಶೇ.12ರ ಕರ ವ್ಯಾಪ್ತಿಗೆ ತಂದಿದ್ದು, ಈವರೆಗೆ ದುಬಾರಿ ದರದಲ್ಲಿದ್ದ ಇವಿಎಂ ಬೈಕ್, ಆಟೋ, ಕಾರುಗಳು, ಅವುಗಳ ಬಿಡಿಭಾಗಗಳ ಮೌಲ್ಯ ಅಗ್ಗವಾಗಲಿದೆ. ಮನೆ ಮನೆಗಳಲ್ಲಿ ಸೌರಶಕ್ತಿಯೂ ಬೆಲೆ ಇಳಿಕೆಯ ಬೆಳಕು ಬೀರಲಿದೆ. ವಿಶ್ವದ ಅತಿದೊಡ್ಡ ಸೌರಶಕ್ತಿ ಮೇಲ್ಛಾವಣಿ ಯೋಜನೆ ‘ಸೂರ್ಯ ಘರ್’ ಪರಿಕರಗಳು ಸಹ ಶೇ.5ರ ತೆರಿಗೆಗೊಳಪಟ್ಟಿದ್ದು, ಅಗ್ಗದ ಬೆಲೆಯಲ್ಲಿ ಪ್ರಖರ ಬೆಳಕು ಚೆಲ್ಲಲಿದೆ. ಭವಿಷ್ಯದಲ್ಲಿ 1 ಕೋಟಿ ಸೌರ ಮೇಲ್ಛಾವಣಿ ಗುರಿ ಮೀರಿಸುವ ಸಾಧನೆಗೆ ಹಾಗೂ 17 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನಾಂದಿಯಾಗಲಿದೆ. ಹಸಿರು ಹೈಡ್ರೋಜನ್ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅತ್ಯುತ್ತಮ ಬೆಂಬಲ ನೀಡುವ ಭಾರತದ ಜಿಎಸ್ಟಿ-2 ಜಗತ್ತಿನ ಶುದ್ಧ ಇಂಧನ ಬೇಡಿಕೆಗೇ ಸ್ವಚ್ಛಂದದ ಬೆಳಕು ತೋರಲಿದೆ.
ಅನ್ನದಾತರಿಗೂ ಶೂನ್ಯ ತೆರಿಗೆಯ ವರದಾನ: ಕೃಷಿ ವಲಯದ ಅಭ್ಯುದಯ, ಕೃಷಿ ವೈವಿಧಿ್ಯಕರಣಕ್ಕೆ ಜಿಎಸ್ಟಿ-2 ಮಹತ್ತರ ಪಾತ್ರ ವಹಿಸಲಿದೆ. ಸೌರ ಪಂಪ್ಸೆಟ್ಗಳು, ಸೋಲಾರ್ ವಿದ್ಯುತ್ ಘಟಕದ ಪರಿಕರಗಳು ಶೇ.5ರ ತೆರಿಗೆ ದರಕ್ಕೆ ತಗ್ಗಿ ನೇಗಿಲಯೋಗಿಗಳಿಗೆ ವರದಾನವಾಗಿದೆ. ಕೃಷಿ ಮೂಲಸೌಕರ್ಯಗಳ ವೆಚ್ಚ ಕಡಿಮೆಯಾಗಿ ಉತ್ಪನ್ನ ಮತ್ತು ಆದಾಯ ವೃದ್ಧಿಸಲಿದೆ. ಟ್ರಾ್ಯಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣ, ಗೊಬ್ಬರ, ಬೀಜ ಮತ್ತು ಔಷಧಗಳೆಲ್ಲ ಅಗ್ಗವಾಗಿ ರೈತರ ಹೆಗಲ ಮೇಲಿದ್ದ ಬೆಲೆ ಏರಿಕೆ ಭಾರ ಇಳಿದಿದೆ.
ಯುವ ಕೈಗಳಿಗೆ ಉದ್ಯೋಗಾವಕಾಶ: ದೇಶದ ಜನಸಂಖ್ಯೆಯಲ್ಲಿ ಶೇ.31ಕ್ಕೂ ಅಧಿಕವಿರುವ ಯುವ ಕೈಗಳಿಗೆ ಉದ್ಯೋಗ ಭಾಗ್ಯ ಸೃಷ್ಟಿಯಾಗಲಿದೆ. ನವೋದ್ಯಮಗಳು, ಜವಳಿ, ಕೃಷಿ, ಇಲೆಕ್ಟ್ರಾನಿಕ್ಸ್, ಶಿಕ್ಷಣ, ಮೆಡಿಕಲ್, ಆಟೋಮೊಬೈಲ್, ಹೀಗೆ ಸರ್ವ ರಂಗಗಳಲ್ಲೂ ಹೊಸ ಉದ್ಯಮಗಳ ಸ್ಥಾಪನೆ ಹೆಚ್ಚಿ ಅಧಿಕ ಉದ್ಯೋಗಾವಕಾಶ ತೆರೆಯಲಿದೆ. ಎಂಎಸ್ಎಂಇಗಳ ಸಂಖ್ಯೆಯೂ ದ್ವಿಗುಣಗೊಳ್ಳಲಿದ್ದು, ಯುವೋದ್ಯಮಿಗಳ ಉದ್ಯಮಾಕಾಂಕ್ಷೆಗೆ ಉತ್ತೇಜಕವಾಗಿದೆ.
ಮಹಿಳೆಯರಿಗೆ ಲಾಭ: ಭಾರತದ ಜನಸಂಖ್ಯೆಯಲ್ಲಿ ಶೇ.48ರಷ್ಟಿರುವ ಮಹಿಳೆಯರು ಈ ದ್ವಿಸ್ತರದ ಜಿಎಸ್ಟಿ ಲಾಭದಲ್ಲಿ ಪಾಲುದಾರರು ಎನ್ನುವುದೇ ವಿಶೇಷ. ಕುಟುಂಬ ನಿರ್ವಹಣೆ ಮತ್ತು ಆಯ-ವ್ಯಯದಲ್ಲಿ ಮಹತ್ತರ ಪಾತ್ರಧಾರಿಗಳಾದ ಸ್ತ್ರೀಯರಿಗೇ ಹೆಚ್ಚು ಕೊಡುಗೆ ಕಲ್ಪಿಸಿದೆ. ಅಡುಗೆ ಸಾಮಾನು, ಬಟ್ಟೆ, ದಿನಬಳಕೆ ಅಗತ್ಯ ವಸ್ತುಗಳ ಮೇಲಿನ ಕರ ಭಾರ ಹಗುರವಾಗಲಿದೆ. ಇನ್ನೊಂದೆಡೆ ಸ್ವ-ಸಹಾಯ ಸಂಘಗಳ ಮೂಲಕ ಸಣ್ಣ ಉದ್ಯಮ ನಡೆಸುತ್ತಿರುವ ಲಕ್ಷಾಂತರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬಲ ತುಂಬಲಿದೆ.
(ಲೇಖಕರು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು,
ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು)