ಸಾಂದರ್ಭಿಕ ಚಿತ್ರ 
ನ್ಯೂಸ್

ಆಗಸ್ಟ್​ 15ರಿಂದ ಮನೆ ಯಜಮಾನಿ ಖಾತೆಗೆ 2000 ರೂ.! : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದು ಸಚಿವ ಸಂಪುಟ ಸಭೆಯ ನಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್​ನ ಐದು ಗ್ಯಾರಂಟಿಗಳಲ್ಲಿ ಎಲ್ಲವನ್ನೂ ಈ ವರ್ಷವೇ ಜಾರಿ ಮಾಡುವುದಾಗಿ ಹೇಳಿದ್ದಾರೆ.

ಇಂದು ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ "ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ನಾವು ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಗ್ಯಾರಂಟಿ ಕಾರ್ಡ್​ಗಳಿಗೆ ನಾನು ಮತ್ತು ಡಿಕೆ ಶಿವಕುಮಾರ್ ಸಹಿ ಮಾಡಿದ್ದೆವು. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಭರವಸೆ ನೀಡಿದ್ದೆವು.

ನಾವು ಹೇಳಿರುವುದು ಮನೆ ಯಜಮಾನಿ ಖಾತೆಗೆ 2000 ರೂ. ಜಮೆ ಮಾಡುತ್ತೇವೆ. ಅವರ ಅಕೌಂಟ್​ಗೆ ತಿಂಗಳಿಗೆ 2 ಸಾವಿರ ರೂ. ಜಮಾ ಮಾಡುತ್ತೇವೆ ಎಂದಿದ್ದೇವೆ. ಆದರೆ ಇದಕ್ಕಾಗಿ ಅಕೌಂಟ್​ ನಂಬರ್, ಆಧಾರ್​ ನಂಬರ್​, ಅರ್ಜಿ ಮುಂತಾದವನ್ನು ನೀಡಬೇಕು. ನಂತರ ಇಲಾಖೆಯವರು ಈ ಮಾಹಿತಿಯನ್ನು ಪ್ರಾಸೆಸ್ ಮಾಡಿ ಆಗಸ್ಟ್​ 15ನೇ ತಾರೀಕಿನಿಂದ ಈ ಯೋಜನೆಯನ್ನು ಜಾರಿಗೆ ತರುತ್ತಾರೆ. ಈಗಾಗಲೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯತ್ತಿರುವವರಿಗೂ ಈ ಭತ್ಯೆ ಸಿಗಲಿದೆ. ಈ ಯೋಜನೆ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಮಹಿಳೆಯರಿಗೆ ಈ ಲಾಭ ಸಿಗಲಿದೆ" ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.