ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಗೃಹ ಜ್ಯೋತಿಗೆ ಯೋಜನೆಯಲ್ಲಿ 200 ಯುನಿಟ್‌ತನಕ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಸರ್ಕಾರ ಈ ತನಕ 8240 ಕೋಟಿ ರೂಗಳನ್ನು ಎಸ್ಕಾಂಗಳಿಗೆ ಪಾವತಿ ಮಾಡಿದ್ದು, ಯಾವುದೇ ಬಾಕಿ ಇರುವುದಿಲ್ಲ ಎಂದು ಮೇಲ್ಮನೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಜೆಡಿಎಸ್‌ನ ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬೆಸ್ಕಾಂಗೆ 3883 ಕೋಟಿ, ಮೆಸ್ಕಾಂ 897. ಸೆಸ್ಕ್ 888, ಹೆಸ್ಕಾಂ 1546, ಜೆಸ್ಕಾಂ 993, ಹುಕ್ಕೇರಿ 33 ಕೋಟಿ ರೂ ಸರ್ಕಾರ ಪಾವತಿ ಮಾಡಿದೆ ಎಂದು ಹೇಳಿದರು.
ಭಾಗ್ಯ ಜ್ಯೋತಿ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ 5953.88 ದಶಲಕ್ಷ ಯುನಿಟ್ ಬಳಕೆಯಾಗಿದ್ದರೆ, ಈ ಸಾಲಿನಲ್ಲಿ ಈ ತನಕ 2558.41 ದಶಲಕ್ಷ ಯುನಿಟ್ ಬಳಕೆಯಾಗಿದೆ ಎಂದರು.