ಶಿವಮೊಗ್ಗ: ಜಿಲ್ಲಾ ಕುರುಬರ ಸಂಘದಿಂದ ಶ್ರೀ ಕನಕದಾಸ ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮ ನ.30ರಂದು ಬೆಳಗ್ಗೆ 10.30ಕ್ಕೆ ಬಾಲರಾಜ ಅರಸ್ ರಸ್ತೆಯ ಕುರುಬರ ಹಾಸ್ಟೆಲ್ ಜಾಗದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಹೇಳಿದರು.
12 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚ ತಯಾರಿಸಲಾಗಿದೆ. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ಶಿವಮೊಗ್ಗ ಜಡೇದೇವರಮಠದ ಸ್ವಾಮಿ ಅಮೋಘ ಸಿದ್ದೇಶ್ವರಾನಂದ ಸಾನ್ನಿಧ್ಯ ವಹಿಸುವರು. ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಶಿಲಾನ್ಯಾಸ ನೆರವೇರಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಬಲ್ಕಿಷ್ ಬಾನು, ಡಾ. ಧನಂಜಯ ಸರ್ಜಿ, ಕುರುಬರ ಸಂಘದ ಅಧ್ಯಕ್ಷ ಪಿ.ಮೈಲಾರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಭಾಗವಹಿಸುವರು ಎಂದರು.
ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ 50 ಲಕ್ಷ ರೂ. ಅನುದಾನ ನೀಡಿದ್ದರು. ಈ ಬಾರಿ 3 ಕೋಟಿ ರೂ. ನೀಡಿದ್ದಾರೆ. ಉಳಿದ ಹಣವನ್ನು ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಸಹಕಾರದೊಂದಿಗೆ ಸಂಗ್ರಹಿಸಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸಂಘದ ರಾಜ್ಯ ಉಪಾಧ್ಯಕ್ಷ ಕೆ.ರಂಗನಾಥ್, ನಿರ್ದೇಶಕ ಶರತ್ ಮರಿಯಪ್ಪ, ಮೂಡ್ಲಿ ರಾಮಕೃಷ್ಣ, ಹನುಮಂತಪ್ಪ, ನವುಲೆ ಈಶ್ವರಪ್ಪ, ಹೊನ್ನಪ್ಪ, ಸಿ.ಎಚ್.ಮಾಲತೇಶ್, ಪ್ರಭಾಕರ್, ಕೃಷ್ಣಮೂರ್ತಿ, ಎಚ್.ಪಾಲಾಕ್ಷಿ, ಇಕ್ಕೇರಿ ರಮೇಶ್, ಸಿದ್ದಪ್ಪ, ಲಕ್ಷ್ಮಣ್, ಗಣೇಶ್, ರಾಘವೇಂದ್ರ, ಕೇಶವ, ಚಂದ್ರಣ್ಣ, ಅನಿಲ್, ಚೇತನ್ ಮಧು ಸುದ್ದಿಗೋಷ್ಠಿಯಲ್ಲಿದ್ದರು.