ನ್ಯೂಸ್

16ರಂದು ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಅರಸೀಕೆರೆ: ನಗರದ ಹೊರವಲಯದ ಹಾಸನ, ಗೀಜಿಹಳ್ಳಿ ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ 9 ಗುಂಟೆ ಜಮೀನಿನಲ್ಲಿ ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಿಸಲು ತೀರ್ಮಾನಿಸಿದ್ದು, ಜೂ.16ರಂದು ಭೂಮಿ ಪೂಜೆ ನೆರವೇರಲಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಬಾಗೇಶಪುರ ಶಿವಣ್ಣ ಹೇಳಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ನಿವೇಶನವನ್ನು ಉಚಿತವಾಗಿ ನೀಡಿದ್ದು 75 ಲಕ್ಷ ರೂ. ಅನುದಾನ ಕೂಡ ಮಂಜೂರು ಮಾಡಿಸಿದ್ದಾರೆ. ಚಿತ್ರದುರ್ಗದ ಶ್ರೀ ಬಸವ ಮಾಚಿದೇವ ಸ್ವಾಮೀಜಿ , ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಲಿದ್ದಾರೆ. ಶ್ರೀಗಳ ಪುರಪ್ರವೇಶ ನಿಮಿತ್ತ ತಾಲೂಕಿನ ಪ್ರತಿ ಹಳ್ಳಿಗೂ ತಲುಪಿ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ನಿವೇಶನ ಹಾಗೂ ಅಗತ್ಯ ಅನುದಾನ ಕೊಡಿಸಿರುವ ಶಾಸಕರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖಂಡರಾದ ರೇಣುಕಪ್ಪ, ಸುರೇಶ್, ಅಶೋಕ್,ಲೋಕೇಶ್ ಇದ್ದರು.