ನ್ಯೂಸ್

ಫಸ್ಟ್​​ ನೈಟ್​ಗೆ ಶುಭ ಕೋರಿ ಬ್ಯಾನರ್​ ಅಳವಡಿಸಿದ ವರನ ಸ್ನೇಹಿತರು!

ಮಂಗಳೂರು: ಒಂದಷ್ಟು ಜನ ಯುವಕರು ಸೇರಿಕೊಂಡು ಸ್ನೇಹಿತನ ಮದುವೆ ದಿನ 'ಮೊದಲ ರಾತ್ರಿಯ ಸಂಭ್ರಮ' ಎಂದು ಬರೆದಿರುವ ಬ್ಯಾನರ್ ಅಳವಡಿಸಿರುವ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಕದ್ರಿ ಪೊಲೀಸ್‌ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದ್ದು, ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾರ್ವಜನಿಕವಾಗಿ ಅಶ್ಲೀಲ ಸಂದೇಶ ಸಾರುವ ಬ್ಯಾನರ್ ಅಳವಡಿಸಿರುವುದರ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ. ಸಮಾಜದಲ್ಲಿ ಮುಜುಗರ ಸನ್ನಿವೇಶ ಉಂಟು ಮಾಡುವ ಬ್ಯಾನರ್ ಹಾಕಿದರವರನ್ನು ಕೂಡಲೇ ಪತ್ತೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವಿವಾಹದ ಮೊದಲ ರಾತ್ರಿಗೆ ಶುಭಾಶಯ ಕೋರಿ ಅಳವಡಿಸಿದ್ದ ಅನಧಿಕೃತ ಬ್ಯಾನರ್​ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅದನ್ನು ತೆರವುಗೊಳಿಸಿದೆ ಎಂದು ವರದಿಯಾಗಿದೆ.