ಬೆಂಗಳೂರು: ಸೋಷಿಯಲ್ ಮೀಡಿಯಾ ಬಂದ ಮೇಲೆ ನಿತ್ಯ ಆಶ್ಚರ್ಯಕರ, ತಮಾಷೆಯಾಗಿರುವ ವೀಡಿಯೋಗಳು ಬೆಳಕಿಗೆ ಬರುತ್ತಿರುತ್ತವೆ. ಸದ್ಯ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿರುವ ವ್ಯಕ್ತಿ ವರ(Groom)ನ ವೇಷ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದು, ಇದೀಗ ಇದರ ವೀಡಿಯೋ ವೈರಲ್ ಆಗಿದೆ.
ರಸ್ತೆಯಲ್ಲಿ ಜನ ವರನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ. ಕೆಲವರು ಅವನೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಮದುವೆ ಮನೆಯಲ್ಲಿ ಏನಾಯಿತು? ಯಾಕೆ ಹೀಗೆ ಹೋಗುತ್ತಿರುವೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಕಡೆಗೆ ಆತ ಸತ್ಯವನ್ನು ಹೇಳಿದ್ದಾನೆ.
ಎಕ್ಸ್‌ಪ್ಲೋರ್_ವಿತ್_ಜತಿನ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋ ಪ್ರಕಾರ, ಶೇರ್ವಾನಿ ಮತ್ತು ಪೇಟ ಧರಿಸಿ ವರನಂತಿದ್ದ ಆತ ರಸ್ತೆಯಲ್ಲಿ ಏಕಾಂಗಿಯಾಗಿ ನಡೆದುಕೊಂಡು ಹೋಗಿದ್ದು ಎಲ್ಲರಿಗೂ ಆಶ್ಚರ್ಯ ಮೂಡುವಂತಾಗಿತ್ತು.
ಸೋಷಿಯಲ್ ಮೀಡಿಯಾದ ತನ್ನ ಫಾಲೋವರ್ಸ್ ನೀಡಿದ ಚಾಲೆಂಜ್ ಅನ್ನು ಪೂರ್ಣಗೊಳಿಸುವ ಸಲುವಾಗಿ ವರನ ವೇಷ ಹಾಕಬೇಕಾಯಿತು ಎಂದು ಈ ವರಮಹಾಶಯ ಸ್ಪಷ್ಟಪಡಿಸಿದ್ದಾನೆ. ಇತ್ತೀಚೆಗೆ ಇಂತಹ ಚಾಲೆಂಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ. ಅವುಗಳನ್ನು ಪೂರ್ಣಗೊಳಿಸಲು ಕೆಲವರು ಮುಂದೆ ಬರುತ್ತಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋವನ್ನು ಇದುವರೆಗೆ ಒಂದು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು 14 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ``ವರನು ರಾಯಲ್ ಆಗಿ ಕಾಣುತ್ತಾನೆ, ಆದರೆ ಅವನು ರಸ್ತೆಯಲ್ಲಿ ಏನು ಮಾಡುತ್ತಿದ್ದಾನೆ?'', `ಎಲ್ಲಿ ಹುಚ್ಚು ಸವಾಲು'', ``ಮದುವೆ ಮಂಟಪದಿಂದ ವರ ಓಡಿಹೋಗುತ್ತಿದ್ದಾನೆ'', ``ಅಣ್ಣ.. ವಧು ಇಷ್ಟವಿಲ್ಲ'', `ವಧುವಿಗೆ ಇಷ್ಟವಿಲ್ಲದಿದ್ದರೆ ನನಗೂ ಇಷ್ಟವಿಲ್ಲ'' ಎಂದು ನೆಟಿಜನ್‌ಗಳು `ನೀನು ದೂರ ಹೋದರೆ' ಎಂದು ಕಾಮೆಂಟ್ ಮಾಡಿದ್ದಾರೆ.