ನ್ಯೂಸ್

ವರನ ಬದಲಾಗಿ ವಧುವಿಗೆ ತಾಳಿ ಕಟ್ಟಿದ ಪುರೋಹಿತ; Viral Video ನೋಡಿದರೆ ತಿಳಿಯುತ್ತೆ ಅಸಲಿಯತ್ತು

ಹರಿದ್ವಾರ: ಪ್ರತಿಯೊಂದು ಧರ್ಮದಲ್ಲೂ ಮದುವೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಧರ್ಮದ್ಲಲೂ ದೀರ್ಘವಾದ ಆಚರಣೆ, ಆಚಾರ, ಸಂಪ್ರದಾಯಗಳನ್ನು ಒಳಗೊಂಡಿರುತ್ತದೆ. ಪ್ರಮುಖವಾಗಿ ಹಿಂದೂ ಧರ್ಮದಲ್ಲಿ ಮದುವೆ ಮುನ್ನ ನಂತರ ಕೆಲವು ಶಾಸ್ತ್ರಗಳನ್ನು ಪಾಲಿಸಲಾಗುತ್ತದೆ. ಮದುವೆ ಸಮಯದಲ್ಲಿ ಮಾಡಿಸಲಾಗುವ ಕೆಲವು ಪೂಜೆಗಳು ಸುದ್ದಿಯಾಗಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಆದರೆ, ಹರಿದ್ವಾರದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸಾಮಾನ್ಯವಾಗಿ ನಾವು ನೋಡಿರುವಂತೆ ಮದುವೆ ಕಾರ್ಯಗಳನ್ನು ಪುರೋಹಿತರು ನಡೆಸಿಕೊಡುತ್ತಾರೆ. ಆದರೆ, ಇಲ್ಲೊಬ್ಬ ಪುರೋಹಿತ ತನ್ನ ಮದುವೆಗೆ ತಾನೇ ಮಂತ್ರಘೋಷಗಳನ್ನು ಪಠಿಸುತ್ತಾ, ತನ್ನ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಈ ಅಪರೂಪದ ಘಟನೆಯು ಹರಿದ್ವಾರದ ಕುಂಜಾ ಬಹದ್ದೂರ್‌ಪುರದಲ್ಲಿ ನಡೆದಿದ್ದು, ಸದ್ಯ ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Viral Video) ಆಗಿದೆ.

ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ ವಧುವಿನ ಜೊತೆಗೆ ಅಗ್ನಿಕುಂಡದ ಮುಂಭಾಗ ಕುಳಿತಿರುವ ವರ ವಿವೇಕ್ ಕುಮಾರ್​​ ಸ್ವತಃ ತಾನೇ ಮಂತ್ರಗಳನ್ನು ಪಠಿಸುತ್ತ ಮದುವೆಯ ಶಾಸ್ತ್ರಗಳನ್ನು ನೆರವೇರಿಸಿದ್ದಾನೆ. ಅರ್ಚಕನಾದ ವರ; ಸ್ವತಃ ತಾನೇ ತನ್ನ ಮದುವೆಯಲ್ಲಿ ವಿವಾಹ ಶಾಸ್ತ್ರವನ್ನು ನಡೆಸಿದ ವರ ಎಂದು ಟ್ವಿಟರ್​ನಲ್ಲಿ ಅಡಿಬರಹವನ್ನು ನೀಡಲಾಗಿದೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ನವಜೋಡಿಗೆ ಶುಭಹಾರೈಸಿ ಕಮೆಂಟ್ ಹಾಕುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ವರ ವಿವೇಕ್​ ಕುಮಾರ್​, ಕೆಲ ಸಮಯದಿಂದ ವೇದ ಮಂತ್ರಗಳನ್ನು ಕಲಿಯುತ್ತಿದ್ದೇನೆ.. ಅದಕ್ಕಾಗಿಯೇ ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ನನ್ನ ವಿವಾಹದ ವಿಧಿವಿಧಾನಗಳನ್ನು ನಾನೇ ನೆರವೇರಿಸಿದ್ದೇನೆ ಎಂದು ಹೇಳಿದ್ದಾರೆ. ಬಿ ಫಾರ್ಮ ಪದವಿದರನಾಗಿರುವ ವಿವೇಕ್​ ಚಿಕ್ಕವಯಸ್ಸಿನಿಂದಲೂ ವೇದ ಮಂತ್ರಗಳನ್ನು ಕಲಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.