ನ್ಯೂಸ್

ಮದುವೆ ಸಂಭ್ರಮದಲ್ಲಿ ಸಂಬಂಧಿಕರೊಂದಿಗೆ ಪ್ರಯಾಣಿಸಿದ ವರನಿಗೆ...!?

ಇಂದೋರ್​: ಮದುವೆಯಾಗಿ ಹೊಸ ಜೀವನಕ್ಕೆ ಕಾಲಿರಿಸುವ ಸಂಭ್ರಮದಲ್ಲಿ ಆತ ಸಂಬಂಧಕರೊಂದಿಗೆ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ. ದೈಹಿಕ ಅಂತರವನ್ನೂ ಕಾಯ್ದುಕೊಳ್ಳದೆ, ಮಾಸ್ಕ್​ ಹಾಕಿಕೊಳ್ಳುವುದನ್ನು ಮರೆತಿದ್ದ. ಈ ಹಿನ್ನೆಲೆಯಲ್ಲಿ ಆ ವಾಹನವನ್ನು ತಡೆದ ಮಧ್ಯಪ್ರದೇಶದ ಇಂದೋರ್​ನ ಮಹಾನಗರ ಪಾಲಿಕೆ ಅಧಿಕಾರಿಗಳು ವರನಿಗೆ 2,100 ರೂಪಾಯಿ ದಂಡ ವಿಧಿಸಿದರು.

ಧಮೇಂಧ್ರ ನಿರಾಲೆ ಜುಲ್ಮಾನೆ ಪಾವತಿಸಿದ ವರ. ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಪ್ರಯಾಣಿಸುವಾಗ ಜನರು ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದನ್ನು ಪರಿಶೀಲಿಸುತ್ತಿದ್ದೆವು. ಆಗ ಒಂದೇ ವಾಹನದಲ್ಲಿ 11 ಜನರ ಜತೆ ಧಮೇಂದ್ರ ಪ್ರಯಾಣಿಸುತ್ತಿದ್ದದ್ದು ಕಂಡುಬಂದಿತು.

ಜತೆಗೆ ಅವರು ಮಾಸ್ಕ್​ ಅನ್ನೂ ಧರಿಸಿರಲಿಲ್ಲ. ದೈಹಿಕ ಅಂತರವನ್ನೂ ಕಾಪಾಡಿಕೊಂಡಿರಲಿಲ್ಲ. ಆದರೆ, ಮದುವೆ ಕಾರ್ಯಕ್ರಮಕ್ಕಾಗಿ ಅಗತ್ಯ ಅನುಮತಿ ಪಡೆದುಕೊಂಡಿದ್ದರು. ಆ ಪ್ರಮಾಣಪತ್ರ ಅವರ ಬಳಿಯಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ 1,100 ರೂ. ಹಾಗೂ ಮಾಸ್ಕ್​ ಧರಿಸದೇ ಇರುವುದಕ್ಕೆ 1 ಸಾವಿರ ರೂ. ಸೇರಿ ಒಟ್ಟು 2,100 ರೂ. ಜುಲ್ಮಾನೆ ವಿಧಿಸಲಾಯಿತು ಎಂದು ಇಂದೋರ್​ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ವಿವೇಕ್​ ಗಂಗ್ರಾದೆ ತಿಳಿಸಿದ್ದಾರೆ.

vijayavani.net/hand-cuffed-beaten-with-rods-and-wooden-sticks/