ನ್ಯೂಸ್

ವೇದಿಕೆಯಲ್ಲಿ ವಧು ಪಕ್ಕವಿರುವಾಗಲೇ ನಿದ್ರೆಗೆ ಜಾರಿದ ವರ! ಈ ವಿಡಿಯೋ ನೋಡಿದರೆ ನೀವೂ ನಗುತ್ತೀರ..

ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಂದರೆ ಅದೊಂದು ರೀತಿಯ ಹಬ್ಬವೇ. ಮದುವೆಗೆ ಮೊದಲು ಒಂದಿಷ್ಟು ಶಾಸ್ತ್ರಗಳಾದರೆ ಮದುವೆ ಆದ ಮೇಲೂ ಹಲವು ಶಾಸ್ತ್ರಗಳಿರುತ್ತವೆ. ಈ ಎಲ್ಲ ಶಾಸ್ತ್ರ ಮಾಡಿ ಮುಗಿಸುವಷ್ಟರಲ್ಲಿ ವಧು ವರರಿಬ್ಬರೂ ಹೈರಾಣಾಗಿಬಿಟ್ಟಿರುತ್ತಾರೆ.

ಅಲ್ಲೊಂದು ಮದುವೆ ಕಾರ್ಯಕ್ರಮ ನಡೆದಿದೆ. ಮದುವೆ ಮುಗಿದಮೇಲೆ ವಧು ವರರನ್ನು ವೇದಿಕೆ ಮೇಲೆ ಕೂರಿಸಲಾಗಿದೆ. ಅದಾಗಲೇ ಶಾಸ್ತ್ರಗಳನ್ನು ಮಾಡಿ ಸುಸ್ತಾಗಿದ್ದ ವರ, ವೇದಿಕೆಯ ಮೇಲೇ ನಿದ್ರೆಗೆ ಜಾರಿ ಬಿಟ್ಟಿದ್ದಾನೆ. ಅದೆಷ್ಟೇ ಎಬ್ಬಿಸಿದರೂ ಎಚ್ಚರವಾಗದಷ್ಟು ಗಾಢ ನಿದ್ರೆಗೆ ಆತ ಜಾರಿದ್ದಾನೆ. ಪಕ್ಕದಲ್ಲಿ ಕುಳಿತ ವಧು ಸುಮ್ಮನೆ ತಲೆ ತಗ್ಗಿಸಿಕೊಂಡು ಕುಳಿತುಬಿಟ್ಟಿದ್ದಾಳೆ.

ಇಂತದ್ದೊಂದು ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಯ್ಯೋ, ಇದ್ಯಾವ ರೀತಿಯ ನಿದ್ರೆಯಪ್ಪಾ ಎಂದು ನೆಟ್ಟಿಗರು ವರನಿಗೆ ಪ್ರಶ್ನಿಸಲಾರಂಭಿಸಿದ್ದಾರೆ. ವರ ಕಂಠ ಪೂರ್ತಿ ಕುಡಿದು ಬಂದಿರಬೇಕು ಅದಕ್ಕೆ ಈ ರೀತಿ ನಿದ್ರೆ ಮಾಡುತ್ತಿದ್ದಾನೆ ಎನ್ನುವ ಕಾಮೆಂಟ್​ಗಳೂ ಬಂದಿವೆ. ವಿಡಿಯೋಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಶೇರ್ ಮಾಡಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್)