Heart Attack: ವಿವಾಹವಾದ ಮೂರೇ ದಿನಗಳಲ್ಲಿ ನವ ವರ ಹೃದಯಾಘಾತದಿಂದ ಮೃತಪಟ್ಟ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಬದಂಗ್‌ಪೇಟೆಯ ಲಕ್ಷ್ಮಿ ದುರ್ಗಾ ನಗರ ಕಾಲೋನಿಯ ಸಾಯಿ ಅನಿಲ್ ಕುಮಾರ್ (26) ಮೃತ. ಈ ತಿಂಗಳ(ಆಗಸ್ಟ್) 7 ರಂದು ವಿವಾಹವಾಗಿದೆ. ಮರುದಿನ, ಬೆಳಗಿನ ಜಾವ ತನ್ನ ನವ ವಧುವಿನೊಂದಿಗೆ ಮನೆಗೆ ತಲುಪಿದ ತಕ್ಷಣ ಅವರಿಗೆ ಹೃದಯಾಘಾತವಾಗಿದೆ. ಅವರ ಕುಟುಂಬದ ಸದಸ್ಯರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ನೀಡುವ ವೇಳೆಗೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ! ಅಸಲಿ ಕಥೆ ಏನು ಗೊತ್ತಾ? Bigg Boss
ಅದ್ಧೂರಿ ಸಮಾರಂಭದಲ್ಲಿ ದಂಪತಿಗಳು ವಿವಾಹವಾಗಿದ್ದು, ಮದುವೆ ಮೆರವಣಿಗೆಯಲ್ಲಿ ಎಲ್ಲರೂ ಸಂತೋಷದಿಂದಿದ್ದರು. ಮದುವೆಯಾದ ಕೇವಲ ಮೂರೇ ದಿನಗಳ ನಂತರ ವರನು ಮೃತಪಟ್ಟಿರುವ ಘಟನೆ ಮದುವೆಯ ಮನೆ ದುರಂತದಿಂದ ತುಂಬಿ ಹೋಗಿದೆ.(ಏಜೆನ್ಸೀಸ್)