ನ್ಯೂಸ್

ಅಜ್ಜಿಯ ಆಸೆ ಈಡೇರಿಸಲು ಹೆಂಡತಿಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದ ವರ! Helicopter

Helicopter: ವರನೊಬ್ಬ ತನ್ನ ಹೆಂಡತಿಯನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಆಗಮಿಸಿ ಅಜ್ಜಿಯ ಆಸೆಯನ್ನು ಈಡೇರಿಸಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಮನೆಗೆ ಬರುವ ಸೊಸೆ ಹೆಲಿಕಾಪ್ಟರ್ ಮೂಲಕ ಆಗಮಿಸಬೇಕೆಂದು ಅಜ್ಜಿಯ ಕನಸನ್ನು ನನಸಾಗಿಸಲು ತನ್ನ ಹೆಂಡತಿಯನ್ನು ರಾಜಮನೆತನದವರಂತೆ ಕರೆತರಲು ವರನೊಬ್ಬ ಹೆಲಿಕಾಪ್ಟರ್​​ನ್ನು ಏರ್ಪಡಿಸಿದ್ದಾನೆ.

ಮಿರ್ಜಾಪುರದ ಅಕ್ಸೋಲಿ ಗ್ರಾಮದ ನಿವಾಸಿ ರೋಹಿತ್ ದುಬೆ, ಉಸ್ರಿ ಖಮರಿಯಾ ಗ್ರಾಮದ ಪ್ರಿಯಾ ತಿವಾರಿ ಅವರನ್ನು ವಿವಾಹವಾಗಿದ್ದು, ವಧುವನ್ನು ಲಕ್ನೋದಿಂದ ಬಂದ ಹೆಲಿಕಾಪ್ಟರ್‌ನಲ್ಲಿ ಅವರ ಮನೆಯಿಂದ ವರನ ಹೊಸ ಮನೆಗೆ ಕರೆದೊಯ್ದಿದ್ದಾನೆ.

ಹೆಲಿಕಾಪ್ಟರ್ ಇಳಿಯುವುದನ್ನು ನೋಡಲು ಸಿಕ್ಕಾಪಟ್ಟೆ ಜನಸಮೂಹ ಜಮಾಯಿಸಿತ್ತು, ಬೆಳಿಗ್ಗೆ 9 ಗಂಟೆಗೆ ವಧುವಿನ ಮನೆಯಿಂದ ಹೊರಟ ಹೆಲಿಕಾಪ್ಟರ್ ಬೆಳಿಗ್ಗೆ 9:30 ರ ಹೊತ್ತಿಗೆ ವರನ ಗ್ರಾಮವನ್ನು ತಲುಪಿತ್ತು.

"ನಮ್ಮ ಸೊಸೆ ಹೆಲಿಕಾಪ್ಟರ್ ಮೂಲಕ ಬರಬೇಕೆಂಬುದು ನನ್ನ ಅಜ್ಜ-ಅಜ್ಜಿಯರ ಆಶಯವಾಗಿತ್ತು. ಅವರ ಪ್ರೇರಣೆಯಿಂದ ಇದು ಸಾಧ್ಯವಾಯಿತು. ನಾವೆಲ್ಲರೂ ತುಂಬಾ ಒಳ್ಳೆಯವರಾಗಿದ್ದೇವೆ ಮತ್ತು ನಿಜವಾಗಿಯೂ ಸಂತೋಷವಾಗಿದ್ದೇವೆ" ಎಂದು ರೋಹಿತ್ ದುಬೆ ಹೇಳಿದ್ದಾರೆ.

"ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ನನ್ನ ಅತ್ತೆಯ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬರುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ, ಆದರೆ ಇಂದು ನನ್ನ ಕನಸು ನನಸಾಗಿದೆ" ಎಂದು ವಧು ಪ್ರಿಯಾ ಹರ್ಷ ವ್ಯಕ್ತಪಡಿಸಿದ್ದಾಳೆ. (ಏಜೆನ್ಸೀಸ್​)