ನ್ಯೂಸ್

VIDEO| ಮದುವೆಗೆ ಆಗಮಿಸಿದ ಆ ಮದುಮಕ್ಕಳ ಬಗ್ಗೆ ನೆಟ್ಟಿಗರ ತೀವ್ರ ಅಸಮಾಧಾನ; ಈ ಆಕ್ರೋಶಕ್ಕೆ ಕಾರಣ ಇಲ್ಲಿದೆ ನೋಡಿ...

ಮದುವೆಗೆ ಮದುಮಕ್ಕಳು ಬರುವುದನ್ನು ದಿಬ್ಬಣ ಎನ್ನುತ್ತೇವೆ. ಆದರೆ ಇಲ್ಲೊಂದು ಮದುವೆಯಲ್ಲಿ ಮದುಮಕ್ಕಳು ಬಂದದ್ದು ಆಂಬುಲೆನ್ಸ್​ನಲ್ಲಿ!

ಹೌದು ಇಂತಹ ಘಟನೆಯನ್ನು ನೋಡಿದ ನೆಟ್ಟಿಗರು ಎಮರ್ಜೆನ್ಸಿಯಲ್ಲಿ ಬಳಸುವ ಆಂಬುಲೆನ್ಸ್​ನಂತಹ ವಾಹನವನ್ನು ಈ ರೀತಿ ಬಳಸಿದ್ದಕ್ಕೆ ಕಿಡಿ ಕಾರಿದ್ದಾರೆ.

ಇಂತಹ ವಿಲಕ್ಷಣ ಘಟನೆ ನಡೆದಿರುವುದು ಮಲೇಷ್ಯಾದಲ್ಲಿ. ಈ ವಿಡಿಯೋವನ್ನು ನೋಡಿದ ಫೇಸ್​ಬುಕ್​ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ನಾಲ್ಕು ನಿಮಿಷದ ವಿಡಿಯೋದಲ್ಲಿ ಅವರಿಬ್ಬರು ಮದುಮಕ್ಕಳ ಉಡುಪಿನಲ್ಲಿ ಬರುತ್ತಾರೆ. ಈ ವಿಡಿಯೋ ಈವರೆಗೆ 1.97 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಪೋಸ್ಟ್​ನ್ನು 200ಕ್ಕೂ ಹೆಚ್ಚು ಬಾರಿ ಶೇರ್​ ಮಾಡಲಾಗಿದೆ.

ವ್ಹೀಲ್​ಚೇರ್​ನಲ್ಲಿ ಮದುಮಗಳು

ಈ ವಿಡಿಯೋದಲ್ಲಿ ಮದುಮಗ, ಮದುಮಗಳನ್ನು ವ್ಹೀಲ್​ಚೇರಿನಲ್ಲಿ ಕರೆ ತರುತ್ತಾನೆ. ಅಲ್ಲದೆ ಈ ಇಬ್ಬರ ಸಂಬಂಧಿಕರೂ ಆಂಬುಲೆನ್ಸ್​ನಲ್ಲಿ ಬರುತ್ತಾರೆ. ಆಂಬುಲೆನ್ಸ್​ನಂತಹ ತುರ್ತು ವಾಹನವನ್ನು ಈ ರೀತಿ ಬಳಕೆ ಮಾಡಿದ್ದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಲೇಷಿಯಾದ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, ಈ ಆಂಬುಲೆನ್ಸ್​ ಖಾಸಗಿಯಾದ್ದಾಗಿದೆ. ಇದನ್ನು ಅವರು ತಮ್ಮ ಮದುವೆಗೆ ಬುಕ್​ ಮಾಡಿದ್ದಾರೆ ಎಂದು ತಿಳಿಸಿದೆ. (ಏಜೆನ್ಸೀಸ್​)