ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ (Marriage) ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ವೈರಲ್ ಆಗುತ್ತಿರುತ್ತವೆ. ಕ್ಷುಲಕ ಕಾರಣಗಳಿಗೆ ಮದುವೆಗಳು ನಿಂತು ಹೋಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗುತ್ತಿದೆ. ಇದೀಗ ಕ್ಷುಲಕ ಕಾರಣಕ್ಕೆ ಮದುವೆಯೊಂದು ನಿಂತು ಹೋಗಿರುವ ಘಟನೆ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ.
ಊಟ ಬಡಿಸುವುದಕ್ಕೆ ತಡ ಮಾಡಿದರು ಎಂಬ ಕಾರಣಕ್ಕೆ ವರ ಮದುವೆಯನ್ನು (Marriage) ರದ್ದುಪಡಿಸಿದ್ದು, ಪ್ರಕರಣ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವರ ತನ್ನ ಹತ್ತಿರದ ಸಂಬಂಧಿಯನ್ನು ಮದುವೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತು ಮಾತನಾಡಿರುವ ಚಂದೌಲಿ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು, ಮೆಹ್ತಾಬ್ ಜೊತೆಗೆ ಏಳು ತಿಂಗಳ ಹಿಂದೆ ಹಮೀದ್ಪುರ ಗ್ರಾಮದ ಯುವತಿಯೊಂದಿಗೆ ಮದುವೆ (Marriage) ನಿಶ್ಚಯಿಸಲಾಗಿತ್ತು. ಡಿಸೆಂಬರ್ 22ರಂದು ಮದುವೆ ದಿಬ್ಬಣ ವಧುವಿನ ಮನೆ ತಲುಪಿದ ನಂತರ ವರನ ಕಡೆಯವರು ಊಟ ಮಾಡಿದ ನಂತರ ಹುಡುಗಿಯ ಕುಟುಂಬಸ್ಥರನ್ನು ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿ ಮದುವೆಯನ್ನು ರದ್ದುಪಡಿಸಿದ್ದಾರೆ.
ವರ ಊಟಕ್ಕೆ ಕುಳಿತಾಗ ಬಡಿಸುವುದು ಸ್ವಲ್ಪ ತಡವಾಯಿತು ಎಂಬ ಕಾರಣಕ್ಕೆ ಮದುವೆಯನ್ನು (Marriage) ರದ್ದುಪಡಿಸಲಾಗಿದ್ದು, ಗ್ರಾಮದ ಪ್ರಮುಖರು ಮಾತುಕತೆ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಆ ಬಳಿಕ ವರ ತನ್ನ ಮೆನೆಗೆ ಹಿಂತಿರುಗಿದ್ದು, ತನ್ನ ಸಂಬಂಧಿಯನ್ನೇ ಮದುವೆಯಾಗಿದ್ದಾನೆ. ಈ ವಿಚಾರ ತಿಳಿದ ವಧುವಿನ ಕುಟುಂಬಸ್ಥರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದು, ಒಟ್ಟು 7 ಲಕ್ಷ ಖರ್ಚು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಾಥಮಿಕವಾಗಿ 1.61 ಲಕ್ಷ ರೂಪಾಯಿ ಹಣವನ್ನು ವಧುವಿನ ಕುಟುಂಬಸ್ಥರಿಗೆ ಕೊಡಿಸಲಾಗಿದೆ ಎಂದು ಚಂದೌಲಿ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.