ನ್ಯೂಸ್

ಭೂ ಸ್ವಾಧಿನ ಪಡಿಸಿಕೊಂಡ ರೈತರ ಜಮೀನಿಗೆ ಪರಿಹಾರ ನೀಡಿ

ರಾಣೆಬೆನ್ನೂರ: ನಗರದ ಹೊರವಲಯದ ಹುಲ್ಲತ್ತಿ ಗ್ರಾಮ ಮತ್ತು ತಾಂಡಾಗಳ ರಸ್ತೆ ನಿರ್ಮಾಣಕ್ಕಾಗಿ ಜಮೀನು ಭೂಸ್ವಾಧಿನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ರೈತರು ಮಂಗಳವಾರ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ 2017&18ನೇ ಸಾಲಿನಲ್ಲಿ ರೈತರಿಂದ 1.22 ಎಕರೆ ಜಮೀನು ಭೂ ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಆದರೆ, ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಇದರಿಂದ ರೈತರು ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ. ಆದ್ದರಿಂದ ಕೂಡಲೇ ರೈತರಿಗೆ ಪರಿಹಾರ ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಜಗದೀಶ ಕೆರೂಡಿ, ಪ್ರಭುಸ್ವಾಮಿ ಕಜಿರ್ಗಿಮಠ, ಚನ್ನಬಸಪ್ಪ ಗುಗ್ಗರಿ, ರಾಜು ಓಲೇಕಾರ, ಹನುಮಂತ ದೊಡ್ಡಮನಿ, ಸಿದ್ದಪ್ಪ ಚಳಗೇರಿ, ಸತೀಶ ಹೊಳಬಾಗಿಲು, ಹನುಮಂತ, ಅಶೋಕ ಕೊಪ್ಪದ, ರವಿ ಕೆರೂಡಿ, ಸಂತೋಷ ವಡ್ಡರ ಮತ್ತಿತರರು ಇದ್ದರು.