Patna: ಬಿಹಾರ ವಿಧಾನಸಭಾ ಚುನಾವಣೆಗಳು (Bihar Election) ಹತ್ತಿರವಾಗುತಿದ್ದಂತೆ, ವಿಪಕ್ಷ ಮಹಾಘಟಬಂದನ್ದಲ್ಲಿ ಅಸಮಧಾನದ ಹೊಗೆಯಾಡುತಿದ್ದು, ಮಿತ್ರಪಕ್ಷಗಳೇ 11 ಸ್ಥಾನಗಳಲ್ಲಿ ನೇರ ಸ್ಪರ್ಧೆ ನಡೆಸುವವ ಸಾಧ್ಯತೆಗಳು ದಟ್ಟವಾಗಿವೆ. ಮೊದಲ ಹಂತದ ಚುನಾವಣೆಗೆ ಹದಿನೈದು ದಿನಗಳು ಬಾಕಿ ಇವೆ.
ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಆರು ಸ್ಥಾನಗಳಲ್ಲಿ ನೇರ ಸ್ಪರ್ಧೆಯಲ್ಲಿದ್ದರೆ, ಸಿಪಿಐ ಮತ್ತು ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಪರಸ್ಪರ ಎದುರಾಳಿಗಳಾಗಿವೆ, ಮುಖೇಶ್ ಸಹಾನಿಯವರ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಮತ್ತು ಆರ್‌ಜೆಡಿ ಒಂದು ಸ್ಥಾನದಲ್ಲಿ (ಚೈನ್‌ಪುರ) ಪೈಪೋಟಿ ನಡೆಸಲಿವೆ. ಸೋಮವಾರ ಆರ್‌ಜೆಡಿ ತನ್ನ 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ವೈಶಾಲಿ, ಸಿಕಂದ್ರ, ಕಹಲ್‌ಗಾಂವ್, ಸುಲ್ತಾನ್‌ಗಂಜ್, ನರಕಟಿಯಾಗಂಜ್ ಮತ್ತು ವಾರ್ಸಲಿಗಂಜ್.
ಸೀಟು ಹಂಚಿಕೆ ಗೊಂದಲವನ್ನು ಬಗೆಹರಿಸಲು ಅನೇಕ ಸಭೆಗಳು ಮತ್ತು ಮಾತುಕತೆಗಳು ನಡೆದರು ಕೂಡ ಮೈತ್ರಿಯಲ್ಲಿ ಒಮ್ಮತ ಮೂಡಲು ಸಾಧ್ಯವಾಗಿಲ್ಲ. ಇದಷ್ಟೆ ಅಲ್ಲದೆ ಸದ್ಯ ಸ್ವತಂತ್ರವಾಗಿ ಸ್ಪರ್ಧಿಸುವ ಮನಸ್ಥಿತಿ ಬಿಹಾರದಲ್ಲಿ ಯಾವ ಪಕ್ಷಕ್ಕೂ ಇಲ್ಲ, ಆದ್ದರಿಂದ ಅಳೆದು ತೂಗಿ ಈ ಹಂತಕ್ಕೆ ತಲುಪಿದೆ. ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ( ಅ 20) ಕೊನೆಯ ದಿನವಾದರು ಮೈತ್ರಿಕೂಟವು ತನ್ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಘೋಷಿಸಿಲ್ಲ.
ಈ ರೀತಿಯ ಆಂತರಿಕ ಸಂಘರ್ಷಗಳು ವಿರೋಧ ಪಕ್ಷದ ಮತಗಳನ್ನು ವಿಭಜಿಸುವ ಸಾಧ್ಯೆತೆ ಇದ್ದು, ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅನಾಯಸವಾಗಿ ಲಾಭ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ನೀಡಿರುವ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತಿದ್ದು, ಮಹಾಘಟಬಂಧನ್ ಅನೇಕ ಸವಾಲಿನ ಸ್ಥಾನಗಳಲ್ಲಿ ವಾಕ್‌ಓವರ್ ನೀಡಿತು ಎಂದಿದ್ದಾರೆ. ಇಷ್ಟು ದೊಡ್ಡ ಮೈತ್ರಿಕೂಟ ವಿಭಜನೆಯ ಅಂಚಿನಲ್ಲಿರುವ ಚುನಾವಣೆಯನ್ನು ನಾನು ಎಂದಿಗೂ ನೋಡಿಲ್ಲ. ಸ್ಥಾನಗಳ ಆಯ್ಕೆಯ ಬಗ್ಗೆ ವಿವಾದವಿರಬಹುದು, ಆದರೆ ಅವರು ಎಷ್ಟು ಸ್ಥಾನಗಳನ್ನು ನಿರ್ಧರಿಸಲು ಸಾಧ್ಯವಾಗಿಲ್ಲ, ವಿರೋಧ ಪಕ್ಷಗಳು ಫ್ರೆಂಡ್ಲಿ ಫೈಟ್ ಎಂದು ಬಿಂಬಿಸುವ ಪ್ರಯತನ್ನದಲ್ಲಿದ್ದು, ಇದನ್ನು ಪಾಸ್ವಾನ್ ಅಲ್ಲಗಳೆದಿದ್ದಾರೆ. ಸ್ನೇಹಪರ ಹೋರಾಟ (ಫ್ರೆಂಡ್ಲಿ ಫೈಟ್) ಎನ್ನುವುಂತದ್ದು ಏನು ಏನೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ:ಚಿನ್ನ 2.50 ಲಕ್ಷ ರೂ. ದಾಟಿದ್ರೂ ಅಚ್ಚರಿಯಿಲ್ಲ! ಇಷ್ಟೊಂದು ಏರಿಕೆಗೆ ಕಾರಣಗಳೇನು? ಹೀಗಿದೆ ತಜ್ಞರ ಉತ್ತರ | Gold
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. ಮೊದಲ ಹಂತದ ಚುನಾವಣೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದರೆ, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಅಕ್ಟೋಬರ್ 20 ಕೊನೆಯ ದಿನವಾಗಿದೆ. (ಏಜೆನ್ಸೀಸ್)