ನ್ಯೂಸ್

ಗ್ರಾಪಂಗೆ ಪ್ಲಾನ್ ಮಂಜೂರು ಅಧಿಕಾರವಿಲ್ಲ

ಬೆಂಗಳೂರು:
ಗ್ರಾಮ ಪಂಚಾಯಿತಿಗೆ ಪ್ಲಾನ್ ಮಂಜೂರಾತಿ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ಲಾನ್ ಮಂಜೂರಾತಿ ಕೊಡೊದು ನಗರ ಪ್ರಾಧಿಕಾರದ ಕೆಲಸ ಎಂದರು.
ನಕ್ಷೆ ಪ್ಲಾನ್ ಕೊಡಲು ತಾಂತ್ರಿಕ ಶಿಕ್ಷಣ ಬೇಕಾಗುತ್ತೆ. ಗ್ರಾಮ ಪಂಚಾಯಿತಿಯಲ್ಲಿ ಆ ಸಿಬ್ಬಂದಿಗಳು ಇರೊದಿಲ್ಲ, ಹೀಗಾಗಿ ಆ ಅಧಿಕಾರವನ್ನು ಕೋರ್ಟ್ ರದ್ದು ಮಾಡಿದೆ ಎಂದರು. ಗ್ರಾಮ ಪಂಚಾಯ್ತಿಗೆ ತಾಂತ್ರಿಕ ಸಿಬ್ಬಂದಿಯನ್ನ ಕಳುಹಿಸಿ ನಕ್ಷೆ ಕೊಡಿಸುವ ಕೆಲಸ ಮಾಡಿಸಲಾಗುವುದು ಎಂದರು.