ನ್ಯೂಸ್

ಉತ್ತಮ ಆಟವಾಡಿ ಗೆಲುವಿನ ಕಡೆ ಸಾಗಿ; ಸುಭಾಸ ಸಾವಕಾರ

ರಾಣೆಬೆನ್ನೂರ: ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆಟದಲ್ಲಿ ಭಾಗವಹಿಸುವುದು ಪ್ರಮುಖವಾಗಿದೆ. ಆಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಕಡೆಗೆ ಸಾಗಬೇಕು ಎಂದು ಆರ್​ಟಿಇಎಸ್​ ಶಿಣ ಸಂಸ್ಥೆಯ ಅಧ್ಯ ಸುಭಾಷ ಸಾವುಕಾರ ಹೇಳಿದರು.
ನಗರದ ಆರ್​ಟಿಇಎಸ್​ ಪದವಿ ಕಾಲೇಜ್​ನ ಆವರಣದಲ್ಲಿ ಮಂಗಳವಾರ ಪದವಿ ಪೂರ್ವ ಶಿಣ ಇಲಾಖೆ ಹಾಗೂ ಎಕ್ಸ್​ಪರ್ಟ್​ ವಿಜ್ಞಾನ ಪದವಿ ಪೂರ್ವ ಕಾಲೇಜ್​ನ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜ್​ಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಿಯ ಆಟಗಳನ್ನು ಆಡುವ ಮೂಲಕ ದೆಹಿಕ ಸಾರ್ಮಥ್ಯ ಹೆಚ್ಚಿಸಿಕೊಳ್ಳಬೇಕು. ವಿದ್ಯಾಥಿರ್ಗಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಮೊಬೈಲ್​ ದಾಸರಾಗಿ ಕ್ರೀಡೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾಥಿರ್ ಹಂತದಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ವಿದ್ಯಾಥಿರ್ಗಳು ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಬಸವೇಶ್ವರ ಎಜುಕೇಶನ್​ ಸೊಸೈಟಿಯ ಅಧ್ಯೆ ಎಸ್​.ಕೆ. ಕೋಟಿ, ಎಕ್ಸ್​ಪರ್ಟ್​ ಕಾಲೇಜ್​ನ ಕಾರ್ಯದಶಿರ್ ಡಾ. ಓ.ಎ್​. ದ್ಯಾವನಗೌಡ್ರ, ಚಂದ್ರಶೇಖರ ಬಣಕಾರ, ಆರ್​ಟಿಇಎಸ್​ ಕಾಲೇಜ್​ ಪ್ರಾಚಾರ್ಯ ಸಿ.ಎ. ಹರಿಹರ, ಭಾಸ್ಕರ ಎಚ್​.ಜಿ., ಕ್ರೀಡಾ ಕಾರ್ಯದಶಿರ್ ಮೃತ್ಯುಂಜಯ ಎಲಿ ಮತ್ತಿತರರು ಉಪಸ್ಥಿತರಿದ್ದರು.