ನ್ಯೂಸ್

ಜನರ ಹಿತ ಮುಖ್ಯವಾಗಿರಲಿ : ಅಧಿಕಾರಿಗಳಿಗೆ ಸಂಸದ ಸುರೇಶ್ ಸಲಹೆ, ಜಿಪಂ ಸಭಾಂಗಣದಲ್ಲಿ ದಿಶಾ ಸಭೆ

Ramanagara

ರಾಮನಗರ :  ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ರೂಪಿಸುವ ಕಾರ್ಯಕ್ರಮದ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಸಾಧಿಸುವುದಕ್ಕೆ ಮಾತ್ರ ಅಧಿಕಾರಿಗಳು ಸೀಮಿತವಾಗಬಾರದು.

ಸರ್ಕಾರ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಿದಾಗ ಅದರಿಂದ ರೈತರು, ಸಾರ್ವಜನಿಕರಿಗೆ ಆಗಿರುವ ಉಪಯೋಗದ ಬಗ್ಗೆ ತಿಳಿದುಕೊಳ್ಳಬೇಕು. ಹನಿ ಮತ್ತು ತುಂತುರು ನೀರಾವರಿ ಯೋಜನೆ ಯಾವ ರೀತಿ ಉಪಯೋಗವಾಗಿದೆ, ರೈತರು ಹೇಗೆ ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕೆಲವು ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಯೋಜನೆಯನ್ನು ಪಡೆದುಕೊಳ್ಳಲಾಗದವರು ಇರುತ್ತಾರೆ. ಅವರನ್ನು ಪತ್ತೆ ಹಚ್ಚಿ ಅರ್ಜಿ ಸಲ್ಲಿಸುವಂತೆ ಮಾಡಬೇಕು ಎಂದರು. ಇನ್ನು ಮುಂದೆ ಹನಿ / ತುಂತುರು ನೀರಾವರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ದಿಶಾ ಸಮಿತಿ ಸದಸ್ಯರ ಗಮನಕ್ಕೆ ತರುವಂತೆ ತಿಳಿಸಿದರು.

ಮುಂದಿನ ದಿನಗಳಲ್ಲಿ ರೇಷ್ಮೆಗೆ ಒಳ್ಳೆಯ ಬೇಡಿಕೆ ಇದೆ.

ರಾಮನಗರ ಹೆಸರಿಗೆ ಮಾತ್ರ ರೇಷ್ಮೆ ನಗರಿ ಎಂದು ಸೀಮಿತವಾಗದೇ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ಎ್.ಪಿ.ಒ.ಗಳಲ್ಲಿ ಕಕೂನ್ ಡ್ರೈಯಿಂಗ್ ಯಂತ್ರಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಇದರಿಂದ ರೇಷ್ಮೆ ಬೆಳೆಗಾರರು ಉತ್ತಮ ಬೆಲೆ ಇದ್ದ ಸಂದರ್ಭದಲ್ಲಿ ಮಾರಾಟ ಮಾಡಬಹುದು.ಶಾಸಕ ಎ.ಮಂಜುನಾಥ್, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಜಿಪಂ ಸಿಇಒ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಉಪಸ್ಥಿತರಿದ್ದರು.

ಸಿ.ಡಿ. ಪ್ರಕರಣ ಮುಚ್ಚಿಹಾಕುವ ಯತ್ನ

ರಾಮನಗರ: ಎ್ಐಆರ್ ಇಲ್ಲದೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವುದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಸಿ.ಡಿ.ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಎ್ಐಆರ್ ಇಲ್ಲದೆ ಎಸ್‌ಐಟಿ ತನಿಖೆ ಎಂದು ಗೃಹ ಸಚಿವರ ಹೇಳಿಕೆ ಗಮನಿಸಿದ್ದೇನೆ. ಇದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಅಷ್ಟೇ.

ಎಲ್ಲ ರೀತಿಯಲ್ಲಿ ತನಿಖೆ ನಡೆಯಬೇಕೆಂದರೆ ಎ್ಐಆರ್ ಆಗಬೇಕು. ಕೇವಲ ಕಣ್ಣು ಒರೆಯಸುವ ತಂತ್ರದ ಭಾಗವಾಗಿ ಪ್ರಕರಣಕ್ಕೆ ಕ್ಲೀನ್‌ಚಿಟ್ ಕೊಡುವ ಸಮಿತಿ ಇದಾಗಿದೆ ಎಂದರು. ಇಡೀ ಪ್ರಕರಣದಲ್ಲಿ ಚನ್ನಪಟ್ಟಣದವರ ಕೈವಾಡ ಇರಬಹುದು. ಚನ್ನಪಟ್ಟಣದವರಿಗೂ ಅಧಿಕಾರಿದ ಮೇಲೆ ಆಸೆ ಇತ್ತಲ್ವಾ. ಅವರೇ ತಾವಾಗೆ ಅವರ ಜತೆಯಲ್ಲಿ ಇದ್ದವರು. ನಾವು ಅವರ ಜೊತೆಯಲ್ಲಿ ಇದ್ವಾ? ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೆಸರು ಹೇಳದೆ ಟೀಕಿಸಿದರು.

ಜಿಲ್ಲೆಯ 2.3 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ : ಸರ್ಕಾರದ ಯೋಜನೆಗಳಿಂದ ಯಾವುದೇ ರೈತರು ವಂಚಿತರಾಗಬಾರದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಿಲ್ಲೆಯ 2,31,000 ರೈತರು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೈತರು ಈ ಯೋಜನೆಗೆ ಅರ್ಹರಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಮನೆ, ಮನೆ ಸಮೀಕ್ಷೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ತಲುಪಿಸಬೇಕು ಎಂದು ಸಂಸದ ಸುರೇಶ್ ತಿಳಿಸಿದರು.

---------------------------------