ನ್ಯೂಸ್

ತಾಂಜಾನಿಯಾದಲ್ಲಿ ಕನ್ನಡಿಗರಿಂದ ಗೌರಿ - ಗಣೇಶ ಹಬ್ಬ ಆಚರಣೆ

ದರ್-ಎಸ್-ಸಲಾಮ್: ತಾಂಜಾನಿಯಾ ದೇಶದ ದರ್-ಎಸ್-ಸಲಾಮ್ ನಗರದಲ್ಲಿರುವ ಕಾವೇರಿ ಕನ್ನಡ ಸಂಘದ ವತಿಯಿಂದ ಗಣೇಶ ಚತುರ್ಥಿಯನ್ನು ಮಂಗಳವಾರ ಸೆ. 19ರಂದು ಆಚರಿಸಲಾಯಿತು.

ದರ್-ಎಸ್-ಸಲಾಮ್‌ನ ಕಿಸುತು ಟೆಂಪಲ್ ಸ್ಟ್ರೀಟ್‌ನಲ್ಲಿರುವ ಪಂಜಾಬಿ ಟೆಂಪಲ್ ಹಾಲ್‌ನಲ್ಲಿ ಗೌರಿ ಮತ್ತು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ ಕನ್ನಡಿಗರು, ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು. ನಂತರ ಮಹಾಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂಡಗಳಿಗೆ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕಿ ಡಾ. ಸೌಮ್ಯಾ ಮಂಜುನಾಥ್ ಚವಾಣ್ ಅವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.