ಸಿದ್ದಾಪುರ: ಕಾಡಂಚಿನ ಆದಿವಾಸಿ ವಿದ್ಯಾರ್ಥಿಗಳೇ ಹೆಚ್ಚಾಗಿ ಕಲಿಯುತ್ತಿರುವ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೊಡಗಿನ ಪ್ರವಾಸಿ ತಾಣಗಳಗೆ ಭೇಟಿ ನೀಡಿ ವೀಕ್ಷಿಸಿ ಫುಲ್ ಖುಷಿಯಾಗಿದ್ದಾರೆ.
ಅರಣ್ಯ ಪರಿಸರದಲ್ಲಿ ದಿನ ಕಳೆಯುತ್ತಿರುವ ವಿದ್ಯಾರ್ಥಿಗಳು ಜಿಲ್ಲೆಯ ಹೊರಭಾಗದಲ್ಲೂ ಅದ್ಭುತ ಆಕರ್ಷಣೆಯಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಆನಂದಿಸಿದ್ದಾರೆ. ಆದಿವಾಸಿಗಳ ಆದಿವಾಸಿ ವಿದ್ಯಾರ್ಥಿಗಳ ಪ್ರವಾಸಕ್ಕೆ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ ಪಾಲಿಬೆಟ್ಟದ ಕೂರ್ಗ್ ಕ್ಲಿಪ್ ರೆಸಾರ್ಟ್ ಮಾಲೀಕ ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಾನ್ ತೋಮಸ್ ಅವರ ಸಹಕಾರಕ್ಕೆ ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ.ಸುಶಾ ಅಭಿನಂದಿಸಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ ವಿದ್ಯಾರ್ಥಿಗಳ ಪ್ರವಾಸ ವಾಹನಕ್ಕೆ ಶಾಲೆಯ ಬಳಿ ಚಾಲನೆ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳು ಸಹಕಾರ ನೀಡುತ್ತಿರುವುದು ಆದಿವಾಸಿ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರ ನೀಡುತ್ತಿರುವುದು ಶ್ಲಾಘನಿಯ. ವಿದ್ಯಾರ್ಥಿಗಳು ಶಾಲೆಗೆ ತಪ್ಪದೇ ಹಾಜರಾಗುವ ಮೂಲಕ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕೆಂದರು.
ಆದಿವಾಸಿ ಮುಖಂಡ ಸಿದ್ದಪ್ಪ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು ಪ್ರವಾಸಿ ವಾಹನಕ್ಕೆ ಬಿಳ್ಕೊಟ್ಟರು. ವಿದ್ಯಾರ್ಥಿಗಳು ಕೊಡಗಿನ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ, ಹಾರಂಗಿ ಅಣೆಕಟ್ಟು, ಗೋಲ್ಡನ್ ಟೆಂಪಲ್, ದುಬಾರೆ ಹಾಗೂ ಚಿಕ್ಲಿಹೊಳೆಗೆ ಒಂದು ದಿನದ ಪ್ರವಾಸ ಕೈಗೊಂಡಿದ್ದರು. ಚೆನ್ನಂಗಿ ಸರ್ಕಾರಿ ಶಾಲೆಯ ಶಿಕ್ಷಕದ ಸತೀಶ್, ಮಂಜುಳಾ, ಪ್ರತಿಮಾ ಸೇರಿದಂತೆ ಮತ್ತಿತರರು ಇದ್ದರು.