ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಜನವರಿ-ೆಬ್ರವರಿ ತಿಂಗಳ ಪರಿಷ್ಕೃತ ಗೌರವಧನ ವ್ಯತ್ಯಾಸದ ಸಂಭಾವನೆ ಪಾವತಿಸಲು 12.24 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಗೌರವಧನವನ್ನು ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ಅನುಮೋದನೆಗೊಂಡಿಲ್ಲದ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಅತಿಥಿ ಉಪನ್ಯಾಸಕರು ಕಾಲೇಜುಗಳಿಗೆ ಹಾಜರಾಗಿ ಕರ್ತವ್ಯನಿರ್ವಹಿಸಿರುವ ಅವಗೆ ಮಾತ್ರ ಗೌರವಧನವನ್ನು ಪಾವತಿಸಲು ಸೂಚಿಸಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿಭಾಗಿಸಿ ಕಾರ್ಯಾಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರು ನೇಮಕಗೊಂಡಿರಬೇಕು.
ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುವ ಉದ್ದೇಶದಿಂದ ಹೆಚ್ಚುವರಿ ವಿಭಾಗ ತೆರೆದು ಹೆಚ್ಚಿನ ಕಾರ್ಯಭಾರ ತೋರಿಸಿ ಲೆಕ್ಕಚಾರ ಮಾಡಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಗೌರವಧನ ಪಾವತಿಸಿದಲ್ಲಿ ಪ್ರಾಂಶುಪಾಲರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.