Headmaster: ಉತ್ತರ ಪ್ರದೇಶದ ಸೀತಾಪುರದಲ್ಲಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಅಲ್ಲಿನ ಮೂಲ ಶಿಕ್ಷಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಯೊಂದು ಬುಧವಾರ (ಸೆಪ್ಟೆಂಬರ್ 24) ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ನಡ್ವಾ ಪ್ರಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಎಂದು ಗುರುತಿಸಲ್ಪಟ್ಟ ಬ್ರಿಜೇಂದ್ರ ಕುಮಾರ್ ವರ್ಮಾ ಅಲ್ಲಿನ ಸಿಬ್ಬಂದಿ ಅಖಿಲೇಶ್ ಪ್ರತಾಪ್ ಸಿಂಗ್ ಮೇಲೆ ಕೋಪಗೊಂಡಿದ್ದು, ತೀವ್ರ ಮಾತಿನ ಚಕಮಕಿ ಉಂಟಾದ ನಂತರ ತಮ್ಮ ಬೆಲ್ಟ್ನಲ್ಲಿ ಹೊಡೆದಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಈ 3 ರಾಶಿಯವರು ತಮ್ಮ ಕೊನೇ ಉಸಿರಿರುವವರೆಗೂ ನ್ಯಾಯಕ್ಕಾಗಿ ಹೋರಾಡುವ ಮನೋಭಾವ ಹೊಂದಿರುತ್ತಾರಂತೆ! Zodiac Signs
ವರದಿಗಳ ಪ್ರಕಾರ, ವರ್ಮಾ ಅವರ ದೂರುಗಳ ಕುರಿತು ವಿಚಾರಣೆ ನಡೆಸಲು ಬಿಎಸ್ಎ ಕಚೇರಿಗೆ ಕರೆಹಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಬಿಎಸ್ಎ ಸಿಂಗ್ ಅವರ ಉತ್ತರದ ಮೇಲೆ ಅತೃಪ್ತಿ ವ್ಯಕ್ತಪಡಿಸಿದರು. ಇದು ವರ್ಮಾ ಅವರನ್ನು ಕೋಪಗೊಳಿಸಿತು. ಕೋಪದ ಭರದಲ್ಲಿ ವರ್ಮಾ ಮೇಜಿನ ಮೇಲೆ ಫೈಲ್ಗಳನ್ನು ಎಸೆದು ಪ್ರಮುಖ ದಾಖಲೆಗಳನ್ನು ಹೊರಿದು ತಮ್ಮ ಬೆಲ್ಟ್ನಿಂದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಪರಿಸ್ಥಿತಿ ಗೊಂದಲಮಯವಾಗಿ ಮುಂದುವರೆದಿದ್ದು, ಕಚೇರಿಯಲ್ಲಿರುವ ಇತರ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಅಧಿಕಾರಿಯನ್ನು ರಕ್ಷಿಸಿದ್ದಾರೆ. ಇನ್ನು ಮುಖ್ಯೋಪಾಧ್ಯಾಯ ವರ್ಮಾ ಅವರನ್ನು ಕೊತ್ವಾಲಿ ನಗರ ಪೊಲೀಸರಿಗೆ ಒಪ್ಪಿಸಿದ್ದು, ಬಿಎಸ್ಎ ಸಿಂಗ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ವರ್ಮಾ ಅವರನ್ನು ಈಗಾಗಲೇ ಹಲ್ಲೆ ಪ್ರಕರಣದ ಅಡಿ ಬಂಧಿಸಲಾಗಿದೆ, ಲಿಖಿತ ದೂರಿನ ಆಧಾರದ ಮೇಲೆ ಸೂಕ್ತ ಸೆಕ್ಸನ್ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದುಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೋದಿ ರಾಷ್ಟ್ರಧ್ವಜ ಹಾರಿಸುವುದನ್ನು ತಡೆದವರಿಗೆ 11 ಕೋಟಿ ರೂ. ಬಹುಮಾನ: ಖಲಿಸ್ತಾನಿ ಉಗ್ರನ ವಿರುದ್ಧ ಕೇಸು ದಾಖಲು! PM Modi
ಆದಾಗ್ಯೂ, ಶಿಕ್ಷಣ ಇಲಾಖೆ ವರ್ಮಾ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಈ ಘಟನೆಯನ್ನು ಶಿಸ್ತು ಮತ್ತು ಸಭ್ಯತೆಯ ಗಂಭೀರ ಉಲ್ಲಂಘನೆ ಎಂದು ಕರೆದಿರುವ ಬಿಎಸ್ಎ , ಅವರ ಸೇವೆಗಳನ್ನು ವಜಾಗೊಳಿಸುವಂತೆ ಶಿಫಾರಸ್ಸು ಮಾಡಿದೆ. (ಏಜೆನ್ಸೀಸ್)