ಮುಂಬೈ: ನಟ, ಶಿವಸೇನೆ ನಾಯಕ ಗೋವಿಂದ ( Govinda ) ಅವರ ಕಾಲಿಗೆ ಅವರದೇ ರಿವಾಲ್ವರ್‌ನಿಂದ ಗುಂಡು ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ನಡೆದಿದೆ. ಗೋವಿಂದ ಬೆಳಗ್ಗೆ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅವರು ತಮ್ಮ ಪರವಾನಗಿ ಹೊಂದಿರುವ ರಿವಾಲ್ವರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಅದು ಮಿಸ್ ಫೈರ್ ಆಗಿದೆ ಎಂದು ಹೇಳಲಾಗುತ್ತಿದೆ.
ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಗೋವಿಂದ ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ವೈದ್ಯರು ಗುಂಡನ್ನು ಹೊರತೆಗೆದಿದ್ದು, ಅವರ ಸ್ಥಿತಿ ಉತ್ತಮವಾಗಿದೆ. ಅವರು ಈಗ ಆಸ್ಪತ್ರೆಯಲ್ಲಿದ್ದಾರೆ.