ನ್ಯೂಸ್

ರಾಜ್ಯಪಾಲ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಸಾವು: ಸ್ವಲ್ಪದರಲ್ಲೇ ತಪ್ಪಿತು ಅನಾಹುತ

ದೇವನಹಳ್ಳಿ: ರಾಜ್ಯಪಾಲರನ್ನು ಕರೆದೊಯ್ಯಲು‌ ಬಂದಿದ್ದ ಗೌರ್ನರ್ ಕಾರು ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ರವಿಕುಮಾರ್. ಎಸ್ ಕಾಳೆ ಮೃತಪಟ್ಟಿರುವ ಕಾರು ಚಾಲಕ. ಹುಬ್ಬಳಿಯಿಂದ ತಡರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಆಗಮಿಸಿದ್ದರು. ಈ ವೇಳೆ ಅವರನ್ನು ಕಾರಿನಲ್ಲಿ ಕರೆದೊಯ್ಯಲು ಚಾಲಕ ರವಿಕುಮಾರ್ ಬಂದಿದ್ದರು. ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ಬಂದು ವಿಐಪಿ ಲಾಂಜ್ ನಲ್ಲಿರುವ ವೇಳೆ ಕಾರು ಚಾಲಕನಿಗೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಇದೇ ವೇಳೆ ಚಾಲಕನಿಗೆ ಹೃದಯಾಘಾತವಾಗಿ ಕಾರಲ್ಲಿ‌ ಕುಸಿದು ಬಿದ್ದಿದ್ದಾನೆ.

ಕಾರು ಚಾಲಕನಿಗೆ ಎದೆನೋವು ಕಾಣಿಸುತ್ತಿದ್ದಂತೆ ತಕ್ಷಣ ಆಂಬುಲೆನ್ಸ್​​ನಲ್ಲಿ ಕರೆದೊಯ್ಯಲಾಗಿದೆ. ಆದರೆ ದಾರಿ ಮಧ್ಯೆಯೇ ಚಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.