ನ್ಯೂಸ್

ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿ

vinaymk1969

ಬೆಂಗಳೂರು: ಬಕ್ರೀದ್​ ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಕೋವಿಡ್​-19 ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಕ್ರಮಗಳ ಅನುಸರಣೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.

ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಮಾಸ್ಕ್​ಗಳನ್ನು ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಹಿರಿಯ ನಾಗರಿಕರು ಯಾರಿಗೂ ಮಸೀದಿಗೆ ಬರಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರಕಾರ ಮಸೀದಿಯಲ್ಲಿ ಒಮ್ಮೆಗೆ 50 ಜನರಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇವರೆಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು. ಪ್ರಾರ್ಥನೆ ಸಲ್ಲಿಸುವಾಗ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ, ಪ್ರಾರ್ಥನೆ ಸಲ್ಲಿಸಲು ಜನರು ತಮ್ಮದೇ ಆದ ಚಾಪೆಗಳನ್ನು ತರಬೇಕು ಎಂದು ಹೇಳಲಾಗಿದೆ.

ಆ.1ರಂದು ಬ್ರಕ್ರೀದ್​: ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂ ಸೈಯದ್​ ಅಹ್ಮದ್​ ಬುಖಾರಿ ಅವರು ಆಗಸ್ಟ್​ 1ರಂದು ಈದ್​ ಅಲ್​ ಅಧಾವನ್ನು ಆಚರಿಸಲಾಗುವುದು. ಚಂದ್ರ ಮಂಗಳವಾರ ರಾತ್ರಿ ಕಾಣಿಸಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.