ನ್ಯೂಸ್

ಸರ್ಕಾರಿ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಲೋಪ!

ಕೋಲಾರ: ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಸೇರಿ ಅನೇಕ ದೂರು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಏ.3ರಂದು ಮುಳಬಾಗಿಲು ತಾಲೂಕಿನ ವಿವಿಧ ಇಲಾಖೆಗಳಿಗೆ ದಿಢೀರ್​ ದಾಳಿ ನಡೆಸಿ ತಪ್ಪಿತಸ್ಥ 10 ಅಧಿಕಾರಿಗಳ ವಿರುದ್ಧ 11 ಸ್ವಯಂ ಪ್ರಕರಣಗಳನ್ನು ದಾಖಸಿಕೊಂಡಿದ್ದಾರೆ.

ಅಧಿಕಾರಿಗಳ, ಸಿಬ್ಬಂದಿ ಕರ್ತವ್ಯದಲ್ಲಿ ಉದಾಸೀನತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ, ಹಾಜರಾತಿ ಸೇರಿ ಹಲವು ಲೋಪಗಳು ಕಂಡು ಬಂದಿದ್ದವು. ಬಸ್​ ನಿಲ್ದಾಣದಲ್ಲಿನ ಅಂಗಡಿಗಳಲ್ಲಿ ನೀರಿನ ಬಾಟಲಿ, ತಿಂಡಿ, ತಂಪು ಪಾನೀಯಗಳು ಇನ್ನಿತರ ಆಹಾರ ಪದಾರ್ಥಗಳನ್ನು ಪರಿಶೀಲಿಸಿದಾಗ ಅವಧಿ ಮುಗಿರುವುದು ಗಮನಕ್ಕೆ ಬಂದಿತು. ನಂದಿನಿ ಪಾರ್ಲರ್​ನಲ್ಲಿ ಬೆಳಗಾವಿ ಕುಂದಾ ಸಿಹಿ ಅವಧಿ ಏ.2ಕ್ಕೆ ಮುಕ್ತಾಯವಾಗಿತ್ತು, ತೂಕದ ಯಂತ್ರಗಳಿಗೆ ಮಾಪನಾಂಕ ರ್ನಿಣಯ ನವೀಕರಿಸದಿರುವುದು, ಮುದ್ರೆ ಇಲ್ಲದಿರುವುದು, ಪ್ರಯಾಣಿಕರ ಅನುಕೂಲಕ್ಕಾಗಿ ಹೋಟೆಲ್​, ವಿಶ್ರಾಂತಿ ಕೊಠಡಿ, ಪಾರ್ಕಿಂಗ್​ ವ್ಯವಸ್ಥೆ, ಶೌಚಗೃಹ ಶುಚಿತ್ವ, ಕುಡಿಯುವ ನೀರು ಇಲ್ಲದೆ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಕ ರಾಜಪ್ಪ ವಿರುದ್ಧ ದೂರು ದಾಖಲಾಗಿದೆ.

* ಲಂಚಕ್ಕೆ ಬೇಡಿಕೆ ಆರೋಪ

ಭೂ ದಾಖಲೆಗಳ ನಿರ್ದೇಶಕಿ ಕೇಂದ್ರಸ್ಥಾನದಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸದೇ ಇರುವುದು, ಜತೆಗೆ ಕಚೇರಿಯ ನಿವೇದಿತಾ, ಪುಟ್ಟಸ್ವಾಮಿ, ಅಶೋಕ್​ ಮೊಬೈಲ್​ನಲ್ಲಿ ಯುಪಿಐ ಪರಿಶೀಲಿಸಿದಾಗ ವೇತನಕ್ಕಿಂತ ಹೆಚ್ಚು ಆರ್ಥಿಕ ವಹಿವಾಟು ನಡೆಸಿರುವುದು, ಬಯೋಮೆಟ್ರಿಕ್​ ಹಾಜರಾತಿ ಅಳವಡಿಸದಿರುವುದು, ಲಂಚದ ಬೇಡಿಕೆ ಇಡುತ್ತಿರುವುದಾಗಿ ಸಾರ್ವಜನಿಕರ ದೂರು ಆಧರಿಸಿ ನಿರ್ದೇಶಕಿ ನಿವೇದಿತಾ ವಿರುದ್ಧ ದೂರು ದಾಖಲಾಗಿದೆ.

* ಪರವಾನಿಗೆಗಳು ಕ್ರಮಬದ್ಧವಾಗಿಲ್ಲ

ಅಬಕಾರಿ ಇಲಾಖೆಯಿಂದ ನೀಡಲಾಗಿರುವ ಸಿಎಲ್​&7 ಹಾಗೂ ಸಿಎಲ್​&9 ಪರವಾನಗಿಗಳು ಕ್ರಮಬದ್ಧವಾಗಿಲ್ಲ, ಸಿಎಲ್​&7 ದಾಖಲೆಯಲ್ಲಿ ಕೇವಲ ಪ್ಲಾ$್ಯನ್​ ಬ್ಲೂ ಪ್ರಿಂಟ್​ ಮಾತ್ರ ಇದ್ದು, ಉಳಿದ ಮಾಹಿತಿಯಿಲ್ಲ. ಗ್ರಾಪಂನಿಂದ ವ್ಯಾಪಾರ ಪರವಾನಗಿ ಪಡೆದುಕೊಳ್ಳದೆ ಇದ್ದರೂ ಸಹ ಅನುಮತಿ ನೀಡಿರುವ ಬಗ್ಗೆ ಲೋಪಗಳು ಕಂಡು ಬಂದಿವೆ. ಇದರಿಂದಾಗಿ ಅಬಕಾರಿ ನಿರೀಕ್ಷಕ ಬಿ.ಎಸ್​.ರೋಹಿತ್​ ವಿರುದ್ಧ ದೂರು ದಾಖಲಾಗಿದೆ.

* ಅನಧಿಕೃತ ವ್ಯಕ್ತಿಗಳ ನೇಮಕ

ಪಂಚಾಯತ್​ ರಾಜ್​ ಇಂಜನಿಯರಿಂಗ್​ ವಿಭಾಗದ ಸಹಾಯಕ ಕಚೇರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್​ಗಳಾದ ಶಿಲ್ಪಾ, ಸುರೇಶ್​, ಸುಭಾಷ್​ ಅವರನ್ನು ಅನುಮತಿ ಇಲ್ಲದೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್​ ನೇಮಕ ಮಾಡಿಕೊಂಡಿದ್ದಾರೆ. 5&6ವರ್ಷದಿಂದ ಅನಧಿಕೃತವಾಗಿ ಕೆಲಸ ನಿರ್ವಹಿಸುತ್ತಿರುವ ಮತ್ತು ವೇತನಕ್ಕಿಂತ ಹೆಚ್ಚು ವಹಿವಾಟು ನಡೆಸಿದ ಈ ಸಂಬಂಧ ಮುಳಬಾಗಿಲು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

* ಮುಂಚಿತವಾಗಿ ಸಹಿ

ಪಿಚ್ಚಗುಂಟ್ಲಹಳ್ಳಿ ಗ್ರಾಪಂ ಕಚೇರಿಯ ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ವಾಟರ್​ ಮನ್​ಗಳಾದ ನಾರಾಯಣಸ್ವಾಮಿ, ಶ್ರೀನಿವಾಸ್​ ಮುಂಚಿತವಾಗಿ ಸಹಿ ಮಾಡಿರುವುದು, ರಸ್ತೆ, ಚರಂಡಿ, ಬೀದಿ ದೀಪಗಳು ಇಲ್ಲದಿರುವ ಹಿನ್ನಲೆಯಲ್ಲಿ ಪಿಡಿಒಗಳಾದ ಸಿ.ಪಿ.ಅಶ್ವತ್ಥ್​, ರವಣಪ್ಪ ವಿರುದ್ಧ ದೂರು ದಾಖಲಾಗಿದೆ.

* ತಹಸೀಲ್ದಾರ್​ ಗೀತಾವಿರುದ್ಧ ದೂರು ದಾಖಲು

ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಆರ್​ಆರ್​ಟಿ 664, ಬಗರ್​ ಹುಕುಂ 193 ಅರ್ಜಿ ಸೇರಿ 2,856 ಅರ್ಜಿ ಬಾಕಿ ಇವೆ. ವರ್ಷದಿಂದ ಪಿಟಿಸಿಎಲ್​ ದಾಖಲೆ ನೀಡುತ್ತಿಲ್ಲ, ಗ್ರಾಮ ಸಹಾಯಕ ಸುಬ್ರಮಣಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ದಾಖಲೆ ನೀಡಿರುತ್ತಿರುವ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವುದು ಕಂಡು ಬಂದಿದೆ. ಅಭಿಲೇಖಾಲಯದಲ್ಲಿ ದಾಖಲೆಗಳು ಶಿಥಿಲವಾಗಿರುವುದು, ಪಡಿತರ ಚೀಟಿ ತಿದ್ದುಪಡಿ ಅರ್ಜಿಗಳು ಬಾಕಿ ಉಳಿದಿವು ಕಂದು ಬಂದಿದ್ದು, ತಹಸೀಲ್ದಾರ್​ ಗೀತಾ ವಿರುದ್ಧ ದೂರು ದಾಖಲಾಗಿದೆ.

* ನಗರಸಭೆಯಲ್ಲಿ ಸಮಸ್ಯೆಗಳ ಪ್ರದರ್ಶನ

ನಗರಸಭೆಯಲ್ಲಿ ಬಯೋಮೆಟ್ರಿಕ್​ ಹಾಜರಾತಿ ಇಲ್ಲದಿರುವುದು, ಪೌರಾಯುಕ್ತ ಶ್ರೀಧರ್​ ಚಿಂತಾಮಣಿಯಲ್ಲಿ ವಾಸವಿರುವುದು. ಸಿಬ್ಬಂದಿ ಸುಬ್ರಮಣಿ ಎರಡು ದಿನ ಗೈರಾಗಿದ್ದರೂ ಸಹ ಪ್ರಶ್ನೆ ಚಿಹ್ನೆ ಇಟ್ಟುರುವುದು. ಚಲನವಲನ ವಹಿಯಲ್ಲಿ ನಮೂದು ಮಾಡದೆ ಇರುವುದು, ನಗದು ಘೋಷಣೆ ಮಾಡಿಕೊಳ್ಳದೆ ಇರುವುದು, ಆರೋಗ್ಯ ನಿರೀಕ್ಷಕಿ ಪ್ರತಿಭಾ ಬ್ಯಾಂಕ್​ ವಹಿವಾಟು ಹೆಚ್ಚಾಗಿರುವುದು. ವಾಣಿಜ್ಯ ಸಂಸ್ಥೆಗಳ ದಾಖಲೆ ಪಾಲನೆ ಮಾಡದೆ ಇರುವುದು, ಬಿ ಖಾತೆ ಮಾಡಲು ನಡವಳಿ ಮಾಡದೆ ಇರುವುದು ಕಂಡು ಬಂದಿವೆ. ವಾಹನಗಳ ದಾಖಲೆಗಳ ಅವಧಿ ಮುಗಿರುವುದು, ಜನನ&ಮರಣ ಪತ್ರ ನೀಡಲು ಹಣ ವಸೂಲಿ ಮಾಡುವುದು ಬೆಳಕಿಗೆ ಬಂದಿದೆ.

* ಅವಧಿ ಮೀರಿದ ಔಷಧ ಪತ್ತೆ

ಸರ್ಕಾರಿ ಆಸ್ಪತ್ರೆಯಿಂದ ಹೊರಗಡೆಗೆ ರೋಗಿಗಳಿಗೆ ಚೀಟಿ ಬರೆದುಕೊಡುವುದು, ಸುಚಿತ್ವ ಕಾಪಾಡದೆ ಇರುವುದು, ಚರ್ಮ ರೋಗಕ್ಕೆ ಸಂಬಂಧಿಸಿದ ಔಷಧಗಳ ಅವಧಿ ಮುಕ್ತಾಯವಾಗಿರುವುದು, ಕರ್ತವ್ಯದ ವೇಳೆ ವೈದ್ಯ ಡಾ.ಕಿಶನ್​ ನಿಗದಿತ ಸಮವಸ್ತ್ರ ಧರಿಸದೆ ಇರುವುದು. ಸಿಜೇರಿಯನ್​ ಡೆಲಿವರಿಗಳ ಸಂಖ್ಯೆ ಹೆಚ್ಚಾಗಿರುವುದು, ಗರ್ಭಪಾತ ಮಾಡುವಾಗ ಕಾನೂನು ಪಾಲನೆ ಮಾಡದಿರುವುದು ಸೇರಿ ಅನೇಕ ದೂರ ಬಂದ ಹಿನ್ನೆಲೆಯಲ್ಲಿ ಟಿಎಚ್​ಒ ಡಾ.ಕೆ.ಎಸ್​.ಸುರೇಂದ್ರ ಎದುರಾರರಾಗಿದ್ದಾರೆ.