ನ್ಯೂಸ್

ಮಾಜಿ ಪ್ರಧಾನಿ Manmohan Singh ನಿಧನ; ರಾಜ್ಯದಲ್ಲಿ ನಾಳೆ ಸರ್ಕಾರಿ ರಜೆ, 7 ದಿನ ಶೋಕಾಚರಣೆ

ಬೆಂಗಳೂರು: ಮಾಜಿ ಪ್ರಧಾನಿ, ಆರ್ಥಿಕ ಸುಧಾರಣೆಯ ಹರಿಕಾರ ಮನಮೋಹನ್​ ಸಿಂಗ್​ (Manmohan Singh) ಅವರು ಡಿಸೆಂಬರ್​ 26ರಂದು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಾಜಿ ಪ್ರಧಾನಿಗಳಿಗೆ ಗೌರವಾರ್ಥವಾಗಿ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದ್ದು, ನಾಳೆ (ಡಿಸೆಂಬರ್​ 27) ಸರ್ಕಾರಿ ರಜೆ ಘೋಷಿಸಲಾಗಿದೆ.

2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮನಮೋಹನ್​ ಸಿಂಗ್​ ಅವರು ಈ ವರ್ಷದ ಏಪ್ರಿಲ್​ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. 1991ರಲ್ಲಿ ರಾಜಕೀಯ ಪ್ರವೇಶಿಸಿದ ಮನಮೋಹನ್​ ಸಿಂಗ್​ ಅವರು ಪಿವಿ ನರಸಿಂಹ ರಾವ್​ ಅವರ ಸಚಿವ ಸಂಪುಟದಲ್ಲಿ  ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.