ನ್ಯೂಸ್

ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ: ಪ್ರತಿ ಟನ್​ ಕಬ್ಬಿಗೆ 3,300 ರೂ. ನಿರ್ಧಾರ! | Sugarcane

ಬೆಂಗಳೂರು: ಕಬ್ಬು(Sugarcane) ಬೆಳೆಗಾರರ ಹೋರಾಟಕ್ಕೆ ಸರ್ಕಾರ ಕೊನೆಗೂ ಮಣಿದಿದೆ. ಪ್ರತಿ ಟನ್​ ಕಬ್ಬಿಗೆ 3,300 ರೂ ಕೊಡಲು ಸರ್ಕಾರ ಇದೀಗ ನಿರ್ಧಾರ ಮಾಡಿದೆ.

ವಿಧಾನಸೌಧದಲ್ಲಿ ಶುಕ್ರವಾರ ರೈತ ಮುಖಂಡರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆದ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಮಾಡಲಾಗಿದೆ.

3,200 ರೂ. ಒಂದೇ ಕಂತಿನಲ್ಲಿ ಕೊಡಬೇಕು

ಇನ್ನು ಪ್ರತಿ ಟನ್​ಗೆ ಕಬ್ಬಿಗೆ 3,200 ರೂ. ಒಂದೇ ಕಂತಿನಲ್ಲಿ ಕೊಡಬೇಕು. ಉಳಿದ 100 ರೂ.ಗಳಲ್ಲಿ ಸರ್ಕಾರದಿಂದ 50 ರೂ ಮತ್ತು ಸಕ್ಕರೆ ಕಾರ್ಖಾನೆ 50 ರೂ, ನೀಡುತ್ತದೆ. ಅಲ್ಲದೆ, ಕಾರ್ಖಾನೆ ಕಡೆಯಿಂದ 50 ರೂ. 6 ತಿಂಗಳೊಳಗೆ ನೀಡಬೇಕು ಎಂದು ಸರ್ಕಾರ  ಮಾಲೀಕರರಿಗೆ ಮಾಡಲಾಗಿದೆ.

ಹಿಂದಿನ ಬೆಲೆ ಹೀಗಿದೆ..

ರಾಜ್ಯದಲ್ಲಿನ ಸದ್ಯಕ್ಕೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 2700 ರಿಂದ 3200 ರೂ. ವರೆಗೂ ನೀಡುತ್ತಿವೆ. ಆದರೆ, ಪ್ರತಿ ಟನ್‌ ಕಬ್ಬಿಗೆ 3500 ರೂ. ದರ ನಿಗದಿ ಮಾಡಲೇಬೇಕು ಎಂಬುದು ರೈತರ ಆಗ್ರಹ. ಅಲ್ಲದೆ, ಕಳೆದ ಹಲವು ದಿನಗಳಿಂದ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಸರ್ಕಾರದ ನಿಧಾರಕ್ಕೆ ರೈತರು ಒಪ್ಪಿದ್ದಾರೆ ಎನ್ನಲಾಗಿದೆ.