ನ್ಯೂಸ್

ಬಾಕಿ ವೇತನ ಪಾವತಿಗೆ ನೌಕರರ ಆಗ್ರಹ

ಬೆಂಗಳೂರು: ಬಾಕಿ ವೇತನ ಮತ್ತು ಎರಡು ವರ್ಷಗಳ ಹಿಂಬಾಕಿ (ಹರಿಯರ್ಸ್ಸ್), ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಒದಗಿಸುವಂತೆ ರಾಜ್ಯ ಡಯಾಲಿಸಿಸ್ ನೌಕರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ರಾಜ್ಯದಲ್ಲಿ 167 ಡಯಾಲಿಸಿಸ್ ಕೇಂದ್ರಗಳಿದ್ದು, ಈವರೆಗೂ ಇವುಗಳ ನಿರ್ವಹಣೆ ಮಾಡುತ್ತಿದ್ದ ಕೊಲ್ಕತ್ತಾ ಮೂಲದ ಎಸ್‌ಕಾಗ್ ಸಂಜೀವಿನಿ ಪ್ರೈ.ಲಿ.ನ ಗುತ್ತಿಗೆ ಸೆ.30ಕ್ಕೆ ಪೂರ್ಣಗೊಂಡಿದೆ. ಆದರೆ ಸಂಸ್ಥೆಯಿಂದ 2ತಿಂಗಳ ವೇತನ ಸೇರಿ ಸೌಲಭ್ಯಗಳು ಬಾಕಿ ಉಳಿದಿದ್ದು, ವೇತನ ಪಾವತಿಗೆ ಶೀಘ್ರ ಕ್ರಮ ವಹಿಸುವಂತೆ ಸಂಘದ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಒಂದು ಸಾವಿರಕ್ಕೂ ಅಕ ಮಂದಿ ಈ ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆರಿಗೆ ರಜೆ ಪಡೆದಿದ್ದ 19 ಮಂದಿಗೆ ಆರು ತಿಂಗಳ ರಜೆ ಸಹಿತ ವೇತನ ದೊರೆತಿಲ್ಲ. ಇದನ್ನು ಒದಗಿಸುವ ಬಗ್ಗೆಯೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.