ನ್ಯೂಸ್

ಬಾಲಕಿಯರ ಸರ್ಕಾರಿ ಕಾಲೇಜಿಗೆ ನಾಮಲಕವೇ ಇಲ್ಲ!

ತಿಪಟೂರು: ಇತಿಹಾಸ ಹೊಂದಿರುವ ನಗರದ ಬಾಲಕಿರ ಸರ್ಕಾರಿ ಪಿಯು ಕಾಲೇಜು ಮೂಲಸೌಕರ್ಯ ವಂಚಿತವಾಗಿದ್ದು, ಕಾಲೇಜು ಕಾಂಪೌಂಡ್​ ಮುಂಭಾಗದಲ್ಲಿರುವ ಮುಖ್ಯದ್ವಾರಕ್ಕೆ ನಾಮಲಕ ಅಳವಡಿಸಲು ಕಾಲೇಜು ಆಡಳಿತ ನಿರಾಸಕ್ತಿ ತೋರುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಸ್​ಎಸ್​ಎಲ್​ಸಿ, ಪಿಯು ಪರೀಕ್ಷೆಯಲ್ಲಿ ಉತ್ತಮ ಲಿತಾಂಶ ದಾಖಲಿಸುವ ಮೂಲಕ ತೆಂಗಿನ ಸೀಮೆಯಲ್ಲಿ ಖ್ಯಾತಿಗಳಿಸಿರುವ ಸರ್ಕಾರಿ ಕಾಲೇಜಿನಲ್ಲಿ ಮೂಲಸೌಲಭ್ಯ ಒದಗಿಸಲು ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಎಸ್​.ಮಹಲಿಂಗಪ್ಪ ಆಗ್ರಹಿಸಿದ್ದಾರೆ. ಪಠ್ಯಪುಸ್ತಕ ತಂದಿದ್ದ ಲಾರಿ ಮುಖ್ಯಧ್ವಾರದಲ್ಲಿ ಕಮಾನು ಆಕಾರದಲ್ಲಿ ಅಳವಡಿಸಿದ್ದ ನಾಮಲಕವನ್ನು ಹಾಳುಗೆಡವಿ ವರ್ಷಗಳೇ ಕಳೆದರೂ ಅದನ್ನು ಸರಿಪರಿಸುವ ಗೋಜಿಗೆ ಕಾಲೇಜು ಆಡಳಿತ ಮಂಡಳಿ ಮುಂದಾಗಿಲ್ಲ. ಕೂಡಲೇ ಸಂಬಂಧಪಟ್ಟವರು ನಾಮಲಕ ಅಳವಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.