ಬೀದರ್: ಚಲಿಸುತ್ತಿದ್ದ ಬಸ್ನಿಂದ ಚಕ್ರಗಳು ಕಳಚಿ ಬಿದ್ದ ಆತಂಕಕಾರಿ ಘಟನೆ ಬಸವಕಲ್ಯಾಣ ಬಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ಇದ್ದಾರೆ.
ಬಸವಕಲ್ಯಾಣ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಆಳಂದ ತಾಲೂಕಿನ ವಿಕೆಸಲಗರಿಂದ ಬಸವಕಲ್ಯಾಣ ಕಡೆಗೆ ಬರುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 9ರಲ್ಲಿನ ಸಸ್ತಾಪೂರ ಬಂಗ್ಲಾ ಬಳಿ ಬಸ್ನ ಚಕ್ರಗಳು ಕಳಚಿ ಬಿದ್ದಿವೆ.
ಹೆದ್ದಾರಿ ಮೇಲೆ ಬಸ್ ವೇಗವಾಗಿ ಹೋಗುತ್ತಿದ್ದಾಗ ಕುರಿಯೊಂದು ಅಡ್ಡ ಬಂದ ಕಾರಣ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಅವಘಡ ಸಂಭವಿಸಿದೆ. ಬಸ್ನ ಹಿಂಭಾಗದ ನಾಲ್ಕು ಚಕ್ರಗಳು ಕಳಚಿ ರಸ್ತೆಯ ಬಲಭಾಗಕ್ಕೆ ಬಿದ್ದಿವೆ. ಬಸವಕಲ್ಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.