ವಿಜಯವಾಣಿ ಸುದ್ದಿಜಾಲ ಕಾರವಾರ: ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿದ ದೇಶವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಯಿತು. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳ ನೌಕರರು ಕರ್ತವ್ಯದಿಂದ ಹೊರಗುಳಿದು ಪ್ರತಿಭಟನಾ ಮತ ಪ್ರದರ್ಶನ ನಡೆಸಿದರು. ಎಲ್ಐಸಿ, ಬಿಎಸ್ಎನ್ಎಲ್, ಕೆಎಸ್ಆರ್ಟಿಸಿ ಸೇರಿ ವಿವಿಧ ಕಾರ್ವಿುಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸಿಐಟಿಯು ನೇತೃತ್ವದಲ್ಲಿ ಎಲ್ಲ ತಾಲೂಕುಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾರವಾರದಲ್ಲಿ ಮಾಲಾದೇವಿ ಮೈದಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಘೊಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಎನ್ಡಬ್ಲ್ಯುಕೆಆರ್ಟಿಸಿ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ವಿುಸಿ ಬಹಿರಂಗ ಸಭೆ ನಡೆಸಿದರು. ನಂತರ ಲಂಡನ್ ಬ್ರಿಜ್ ಸಮೀಪ ಸುಮಾರು 20 ನಿಮಿಷ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದರು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಬ್ಯಾಂಕ್ ಯೂನಿಯನ್ನ ವಾಸುದೇವ ಶೇಟ್, ವಿನೋದ ಬಾಂದೇಕರ್, ಎಐಐ
ಇಎಯ ಎಚ್.ಕೆ. ನಾಯಕ, ಗಜಾ ಮೇಸ್ತಾ, ಪ್ರಶಾಂತ ನಾಯ್ಕ, ದೀಪಕ ಕುಡಾಳ್ಕರ್ ಕರ್ನಾಟಕ ಪ್ರಾಂತ ರೈತ ಸಂಘದ ಶ್ಯಾಮನಾಥ ನಾಯ್ಕ, ಸಿಐಟಿಯುನ ಯಮುನಾ ಗಾಂವಕರ್, ಮಂಜುಳಾ ಕಾಣಕೋಣಕರ್, ಮಾಯಾ ಕಾಣೇಕರ್, ತಾರಾ ನಾಯ್ಕ, ನಿರ್ಮಲಾ ನಾಯ್ಕ, ವೈಶಾಲಿ ನಾಯ್ಕ, ಅಕ್ಷರ ದಾಸೋಹ ಸಂಘದನೆಯ ಜಯಶ್ರೀ ಗೌಡ, ಶೈಲಾ ಹರಿಕಂತ್ರ, ಎಸ್ಎಫ್ಐ ವಿಶಾಲ ನಾಯ್ಕ ಇದ್ದರು.
ಶಿರಸಿ ವರದಿ: ಸಿಐಟಿಯು ಹಾಗೂ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನಗರದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರು ಗುರುವಾರ ಮೆರವಣಿಗೆ ನಡೆಸಿದರು. ನಗರದ ಬಿಡ್ಕಿಬೈಲಿನಿಂದ ಆರಂಭವಾದ ಮೆರವಣಿಗೆ ಶಿವಾಜಿಚೌಕ, ಸಿ.ಪಿ. ಬಜಾರ ಮತ್ತಿತರ ಕಡೆ ಸಂಚರಿಸಿತು. ಈ ವೇಳೆ ಸಿಐಟಿಯು ಪ್ರಮುಖರಾದ ನಾಗಪ್ಪ ನಾಯ್ಕ, ಸಿ.ಆರ್. ಶಾನಭಾಗ ಮತ್ತಿತರರು ಹಾಜರಿದ್ದರು.
ದಾಂಡೇಲಿ ವರದಿ: ನಗರದಲ್ಲಿ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ ಪ್ರಧಾನಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶೈಲೇಶ ಪರಮಾನಂದ ಮೂಲಕ ಸಲ್ಲಿಸಲಾಯಿತು. ಜಂಟಿ ಸಮಿತಿಯ ತಾಲುಕು ಸಂಚಾಲಕ ಸಲೀಂ ಸೈಯದ್, ಸಹ ಸಂಚಾಲಕ ಟಿ.ಎಸ್. ನಾಯ್ಕ, ಕಟ್ಟಡ ಕಾರ್ವಿುಕ ಸಂಘಟನೆಯ ಅಧ್ಯಕ್ಷ ಕೋಸಾವ ಡಿಸೋಜಾ, ವೆಸ್ಟ್ ಕೋಸ್ಟ್ ಪೇಪರ್ವಿುಲ್ ಕಾರ್ವಿುಕ ಸಂಘಟನೆಯ ಮುಖಂಡ ಗಣಪತಿ ನಾಯ್ಕ, ಅಂಗನವಾಡಿ ಸಂಘಟನೆಯ ಅಧ್ಯಕ್ಷೆ ಪದ್ಮಾ ಕಾಳೆ ಇತರರು ಪಾಲ್ಗೊಂಡಿದ್ದರು.
ಮುಂಡಗೋಡ ವರದಿ: ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಘಟಕದವರು ಕೃಷಿಕೂಲಿಕಾರರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಜಿ.ಬಿ.ಭಟ್ಟ ಅವರ ಮೂಲಕ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಭೀಮಣ್ಣ ಭೋವಿ, ಹನುಮಂತ ನ್ಯಾಸರ್ಗಿ, ರವಿ ಲಕ್ಕೊಳ್ಳಿ, ಭೂತೇಶ ಚಿತ್ರಗಾರ, ಬಸವರಾಜ ಧಾರವಾಡ, ವಾಣಿ ತೆವರ್, ದಸ್ತಗೀರ್ ಮಳಗಿ, ಕೋಟೇಶ ಕೊಳಗಿ ಇತರರಿದ್ದರು.
ಸಿದ್ದಾಪುರ ವರದಿ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮತ್ತಿತರ ಸಂಘಟನೆಯವರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ಪ್ರಧಾನಮಂತ್ರಿ ಅವರಿಗೆ ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ ಹಾಗೂ ಸಿಡಿಪಿಓ ಸುಶೀಲಾ ಮೊಗೇರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಸುಧಾ ಕೊಂಡ್ಲಿ. ಶ್ರೀಮತಿ ಕೊಂಡ್ಲಿ, ಯಮುನಾ ಇತರರು ಇದ್ದರು.
ಯಲ್ಲಾಪುರ ವರದಿ: ತಾಲೂಕು ಅಂಗನವಾಡಿ ನೌಕರರ ಸಂಘದ ಸದಸ್ಯರು ಪಟ್ಟಣದ ಶಿವಾಜಿ ಸರ್ಕಲ್ನಿಂದ ಅಂಬೇಡ್ಕರ್ ಸರ್ಕಲ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷೆ ಲಲಿತಾ ಹೆಗಡೆ, ಸಂಚಾಲಕಿ ಗೌರಿ ಮರಾಠಿ, ಕಾರ್ಯದರ್ಶಿ ಲಕ್ಷ್ಮೀ ಸಿದ್ದಿ, ಪ್ರತಿನಿಧಿಗಳಾದ ಅನಸೂಯಾ ಶೇಟ್, ಮಾಲಿನಿ ಹೆಗಡೆ, ಸುನೀಲ ಶೇರುಗಾರ, ತ್ರೇಷಾ ನೋಹಾ, ಲಕ್ಷ್ಮೀ ಹುಣಸಗೇರಿ, ಗೌರಿ ಮರಾಠಿ, ತುಳಸಿ, ಮಂಜುಳಾ ಇತರರಿದ್ದರು.
ಕುಮಟಾ ವರದಿ: ಪಟ್ಟಣದ ಕಾರ್ವಿುಕ ಸಂಘಟನೆಗಳು ಮಣಕಿ ಮೈದಾನದಿಂದ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿ ಬಳಿ ಜಮಾಯಿಸಿ ಕಾರ್ವಿುಕ ಹಕ್ಕುಗಳಿಗಾಗಿ ಘೊಷಣೆಗಳನ್ನು ಕೂಗಿದರು. ನಂತರ ಮನವಿಯನ್ನು ತಹಸೀಲ್ದಾರ್ ಮೇಘರಾಜ ನಾಯ್ಕ ಅವರಿಗೆ ಸಲ್ಲಿಸಿದರು. ಸಿಐಟಿಯು ತಾಲೂಕು ಅಧ್ಯಕ್ಷೆ ಸವಿತಾ ತನ್ಮಡಗಿ, ಕಾರ್ಯದರ್ಶಿ ಮಂಗಲಾ ಭಂಡಾರಿ, ಖಜಾಂಚಿ ಮಹಾದೇವಿ ಪಟಗಾರ, ಜೆಸಿಟಿಯು ಪ್ರತಿನಿಧಿ ಶಾಲಿನಿ ಕಲ್ಮನೆ, ವಿವಿಧ ಕಾರ್ವಿುಕ ಸಂಘಟನೆಯ ಪದಾಧಿಕಾರಿಗಳಾದ ರಮಾ ಭಂಡಾರಿ, ತುಳಸಿ ಅಂಬಿಗ, ಪ್ರಮೋದಿನಿ ನಾಯ್ಕ, ಉಮಾ ಗುಡಿಮನೆ, ಹೇಮಾವತಿ ನಾಯ್ಕ, ಹೇಮಾವತಿ ನಾಯ್ಕ, ಸಾವಿತ್ರಿ ಪಟಗಾರ ಇನ್ನಿತರರು ಇದ್ದರು.
ಹಳಿಯಾಳ ವರದಿ: ಪಟ್ಟಣದಲ್ಲಿ ವಿವಿಧ ಕಾರ್ವಿುಕ ಸಂಘಟನೆಗಳು ವಲ್ಲಭ ಭಾಯ್ ಉದ್ಯಾನದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ಮನವಿ ಪತ್ರವನ್ನು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಸಿಐಟಿಯು ಪ್ರಮುಖರಾದ ಹರೀಷ ನಾಯ್ಕ, ಆರ್.ಎಂ. ಮುಲ್ಲಾ, ಠಕ್ಕಪ್ಪ ಗುರಬಣ್ಣನವರ, ಜಯಶ್ರೀ ಚವ್ಹಾಣ, ಬ್ರಿಜಿಟಾ ಬೃಗಾಂಜಾ, ಹನುಮಂತ ಶಿಂದೋಗಿ, ಹಸೀನಾ ಕಿತ್ತೂರ, ಸುವರ್ಣಾ ಮಿರಾಶಿ, ಪ್ರಕಾಶ ಚನಾಬತ್ತಿ, ಶೋಭಾ ಕುರಟ್ಟಿ ಮಹಾದೇವ ಗೋಣಿ ಇದ್ದರು.