ಕತಾರ್ನಲ್ಲಿನ ಕರ್ನಾಟಕ ಸಂಘಕ್ಕೆ 2020ನೇ ಸಾಲಿನ ನೂತನ ಆಡಳಿತ ಸಮಿತಿ ರಚನೆಯಾಯಿತು. ಈ ಸಂಘ ಕಳೆದ 20 ವರ್ಷಗಳಿಂದಲೂ ಸಂಸ್ಕೃತಿ ರಕ್ಷಣೆ, ಸೇವೆಯಲ್ಲಿ ತೊಡಗಿಕೊಂಡಿದೆ. 2020-21ರ ಸಾಲಿನ ಆಡಳಿತ ಸಮಿತಿಗೆ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ಕರ್ನಾಟಕ ಸಂಘ, ಕತಾರ್ನ ನೂತನ ಅಧ್ಯಕ್ಷರಾಗಿ ಮೈರ್ಪಾಡಿ ನಾಗೇಶ್ ರಾವ್ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಬೋಲೂರ್ ಮತ್ತು ಪ್ರಧಾನಕಾರ್ಯದರ್ಶಿಯಾಗಿ ಮುರಳಿಧರ್ ರಮನಾಥ್ ರಾವ್ ಆಯ್ಕೆಯಾಗಿದ್ದಾರೆ.
ಉಳಿದಂತೆ ನೂತನ ಅಧಿಕಾರಿಗಳ ಪಟ್ಟಿ ಹೀಗಿದೆ
ಖಜಾಂಚಿ: ಲಕ್ಕಪ್ಪ ಲಕ್ಕೇಗೌಡ
ಸಾಂಸ್ಕೃತಿಕ ಕಾರ್ಯದರ್ಶಿ: ಅಕ್ಷಯಾ ಶೆಟ್ಟಿ
ಕ್ರೀಡಾ ಕಾರ್ಯದರ್ಶಿ: ಸಂಜಯ್ ಕುದರಿ
ಜಂಟಿ ಕಾರ್ಯದರ್ಶಿ ಮತ್ತು ಕನ್ನಡ ಸಂಬಂಧಿತ ಸಂಚಾಲಕರು: ಕಿಶೋರ್.ವಿ.
ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಸಂಚಾಲಕರು: ಕುಮಾರಸ್ವಾಮಿ ಸಿ.ಆರ್.
ಮಹಿಳಾ ಸಂಚಾಲಕರು: ಸುಶೀಲಾ ಸುನೀಲ್
ಮಕ್ಕಳು ಮತ್ತು ವಿಶೇಷ ಅವಶ್ಯಕತೆಗಳ ಸಂಚಾಲಕರು: ರಶ್ಮಿ ಜಯರಾಮ್
ಸದಸ್ಯರುಮತ್ತು ನಿರ್ದೇಶಾಂಕ ಸಂಚಾಲಕರು: ನೂರ್ಅಹ್ಮದ್
ಪ್ರಸಕ್ತ ಸಮಿತಿಯ ಅಧ್ಯಕ್ಷರಾಗಿರುವ ನಾಗೇಶ್ ರಾವ್ ಅವರು ಕಳೆದ 29 ವರ್ಷಗಳಿಂದಲೂ ಕತಾರ್ನಲ್ಲಿ ವಾಸವಾಗಿದ್ದಾರೆ. ಕರ್ನಾಟಕ ಸಂಘದ ಸಕ್ರಿಯ ಸದಸ್ಯರಲ್ಲಿ ಓರ್ವರು. ಇವರು ಮೂಲತಃ ಪುತ್ತೂರಿನವರಾಗಿದ್ದು ಕತಾರ್ನಲ್ಲಿ ಔಷಧೀಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಇದ್ದ ಸಮಿತಿಯನ್ನು ಅದರ ಅಧ್ಯಕ್ಷರಾಗಿದ್ದ ವೆಂಕಟ ರಾಯರು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಕೆ.ಎಂ.ವರ್ಘೀಸ್ ಅವರ ನೇತೃತ್ವದಲ್ಲಿ ಫೆ.28ರಂದು ವಿಸರ್ಜಿಸಲಾಗಿತ್ತು.
ಕರ್ನಾಟಕ ಸಂಘದ ಪರಿಚಯ
ಕತಾರ್ನಲ್ಲಿರುವ ಕರ್ನಾಟಕ ಸಂಘ ಭಾರತೀಯ ಸಾಂಸ್ಕೃತಿಕ ಕೇಂದ್ರದ ಒಂದು ಅಂಗಸಂಸ್ಥೆಯಾಗಿದೆ. ಕತಾರ್ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಭಾರತೀಯರ ಒಂದು ವೈವಿಧ್ಯಮಯ ಸಂಘಟನೆಯಾಗಿದ್ದು ಸುಮಾರು 800 ಜನ ಸದಸ್ಯರು ಇದ್ದಾರೆ. ಸಾಂಸ್ಕೃತಿಕ, ಕ್ರೀಡೆ ಮತ್ತು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.