ನ್ಯೂಸ್

ಟೈಫಾಯಿಡ್​ನಿಂದ ಬಳಲುತ್ತಿರುವ ಗೂಗ್ಲಿ ಬೆಡಗಿ; ಅಭಿಮಾನಿಗಳಿಗೆ ವಿಶೇಷ ಸಂದೇಶ ಹಂಚಿಕೊಂಡ ಕೃತಿ ಕರಬಂಧ! | Kriti Karabandha

ಬೆಂಗಳೂರು: ಯಶ್​ ಅಭಿನಯದ ಸೂಪರ್​ಹಿಟ್​ ಚಿತ್ರ 'ಗೂಗ್ಲಿ' ಸಿನಿಮಾದ ಮೂಲಕ ಸ್ಯಾಂಡಲ್​​ವುಡ್​ಗೆ ಪದಾರ್ಪಣೆ ಮಾಡಿದ ನಟಿ ಕೃತಿ ಕರಬಂಧ(Kriti Karabandha) ಕನ್ನಡಿಗರ ಮನೆ ಮಾತಾಗಿದ್ದಾರೆ.

ಸೋಷಿಯಲ್​​ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್​ ಇರುವ ನಟಿಯಲ್ಲೊಬ್ಬರಾದ ಕೃತಿ. ಕೆಲ ದಿನಗಳಿಂದ ಸೈಲಂಟ್​ ಆಗಿ ಇದ್ದರು. ಇದೀಗ ತಮಗೆ ಟೈಫಾಯಿಡ್​​ ಜ್ವರ ಬಂದಿರುವುದರ ಬಗ್ಗೆ ಹೇಳುವ ಮೂಲಕ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಕಳೆದ ವಾರದಿಂದ ಆರೋಗ್ಯವಾಗಿಲ್ಲ.(ಟೈಫಾಡ್​ ಜ್ವರ) ಸೋಂಕಿನ ವಿರುದ್ಧ ಹೋರಾಡುತ್ತಿರುವುದಾಗಿ ಕೃತಿ ಹೇಳಿಕೊಂಡಿದ್ದಾರೆ. ತ್ವರೀತ ಚೇತರಿಕೆಗೆ ಸಂಬಂಧಪಟ್ಟಂತೆ ಸಲಹೆ ಹಂಚಿಕೊಳ್ಳಿ, ನಿಮ್ಮ ಪ್ರೀತಿ ಸದಾ ನನ್ನ ಮೇಲೆ ಇರಲಿದೆ ಎಂದಿದ್ದಾರೆ.

ಪ್ರೀತಿ, ಸಲಹೆ ಕೊಡಿ

'' ಎಲ್ಲರಿಗೂ ನಮಸ್ಕಾರ.. ಸಲ್ಪ ದೈನಂದಿನ ಆಪ್​ಡೇಟ್​, ಕಳೆದ ವಾರದಿಂದ ಟೈಫಾಡ್​​ ಜ್ವರ ಬಂದಿದೆ. ಚೇತರಿಕೆಯ ಹಾದಿಯಲ್ಲಿದ್ದೇನೆ. ಮುಂದಿನ ಒಂದೇರೆದಡು ದಿನಗಳಲ್ಲಿ ಪುಟಿದೇಳುವ ಭರವಸೆ ಇದೆ. ಪ್ರೀತಿ ಮತ್ತು ಸಲಹೆಗಳನ್ನು ನನ್ನ ಜತೆ ಹಂಚಿಕೊಳ್ಳಿ'' ಎಂದು ಭಾನುವಾರ ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಕೃತಿ ಕರಬಂಧ ಸಿನಿಮಾ ವಿಚಾರಕ್ಕೆ ಬರುವುದಾರೆ, 2009ರಲ್ಲಿ ತೆಲುಗಿನ ಬೋನಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಟ್ಟಿದ್ದಾರೆ. ಬಳಿಕ 2016ರಲ್ಲಿ ಬಾಲಿವುಡ್​ನಲ್ಲಿ ಸೂಪರ್​ಹಿಟ್​ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಲ್ಲೇ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು. ಅಲ್ಲಿಂದ ವಿವಿಧ ಭಾಷೆಗಳಲ್ಲಿ ನಟಿಸಿರು ಕೃತಿ ಕನ್ನಡಲ್ಲಿ ಗೂಗ್ಲಿ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ನಿರ್ದೇಶಕ ಅಬೀರ್ ಸೇನ್‌ಗುಪ್ತಾ ಅವರ ಮುಂಬರುವ ಹಾಸ್ಯಮಯ 'ರಿಸ್ಕಿ ರೋಮಿಯೋ' ದಲ್ಲಿ ಸನ್ನಿ ಸಿಂಗ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)