Google : ಕಳೆದ 1 ವರ್ಷದಿಂದ ಕೆಲಸವಿಲ್ಲದೇ ಇರುವ ತನ್ನ ಉದ್ಯೋಗಿಗಳಿಗೆ ಗೂಗಲ್(Google) ವೇತನ ನೀಡುತ್ತದೆ ಎಂಬ ಹೊಸ ವಿಚಾರದ ಇದೀಗ ಬಹಿರಂಗಗೊಂಡಿದೆ.
ಇದನ್ನೂ ಓದಿ:ಕ್ಯಾರೆಟ್ ನೇತುಹಾಕಿ ಕತ್ತೆಯಿಂದ ರೀಲ್ ಮಾಡಲು ಪ್ರಯತ್ನಿಸಿ ವ್ಯಕ್ತಿ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
ಹೌದು, ಇತ್ತೀಚಿನ ದಿನಗಳಲ್ಲಿ ದೊಡ್ಡ ಕಂಪನಿಗಳು ಕಾರಣ ಹೇಳದೆ ಪರೋಕ್ಷವಾಗಿ ಅಥವಾ ನೇರವಾಗಿ ಲಕ್ಷಾಂತರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿವೆ.ಆದರೆ, ಗೂಗಲ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಗೂಗಲ್ನಲ್ಲಿ ಕೆಲಸ ಮಾಡದೇ ಇರುವ ತನ್ನ ಸಿಬ್ಬಂದಿಗೆ 1 ವರ್ಷದಿಂದ ವೇತನ ನೀಡುವ ಮೂಲಕ ಕೆಲಸದ ವಿಚಾರದಲ್ಲಿ ವಿಭಿನ್ನವಾದ ದಾರಿ ತುಳಿದಿದೆ.
ಗೂಗಲ್‌ನ AI ಶಾಖೆಯ ಡೀಪ್‌ಮೈಂಡ್‌ನ ಕೆಲವು ಎಂಜಿನಿಯರ್‌ಗಳಿಗೆ ಇಡೀ ವರ್ಷ ಯಾವುದೇ ಕೆಲಸ ಮಾಡದೆ ಸಂಬಳ ನೀಡಲಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಡೀಪ್‌ಮೈಂಡ್‌ನ ಕೆಲವು ಹಳೆಯ ಉದ್ಯೋಗಿಗಳು ಗೂಗಲ್ ಸೇರಿದಂತೆ ಎಲ್ಲಿಯೂ ಕೆಲಸ ಮಾಡುತ್ತಿಲ್ಲವಾದರೂ ಇನ್ನೂ ಕಂಪನಿಯಿಂದ(ಗೂಗಲ್ನಿಂದ) ಸಂಬಳ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ವಿಚಿತ್ರ ಎನಿಸಿದರೂ ಕಂಪನಿಯನ್ನು ತೊರೆದ ನಂತರ ಉದ್ಯೋಗಿ ಬೇರೆ ಯಾವುದೇ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವುದನ್ನು ತಡೆಯುವ ಗೂಗಲ್‌ನ ಹೊಸ ನಿಯಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಡೀಪ್‌ಮೈಂಡ್‌ನಲ್ಲಿ, ಅಂತಹ ಉದ್ಯೋಗಿಗಳನ್ನು "ವಿಸ್ತೃತ ಉದ್ಯಾನ ರಜೆ" ಮೇಲೆ ಇರಿಸಲಾಗಿದೆ, ಅಂದರೆ ಅವರು ಕಂಪನಿಯ ಭಾಗವಾಗಿಲ್ಲ ಆದರೆ ಬೇರೆ ಯಾವುದೇ ಕಂಪನಿಗೆ ಹೋಗದಂತೆ ಇಡೀ ವರ್ಷ ಕೆಲಸ ಮಾಡದೆ ಅವರಿಗೆ ಸಂಬಳ ನೀಡಲಾಗುತ್ತಿದೆ.
ಗೂಗಲ್ ತನ್ನ ಎಲ್ಲಾ ಒಪ್ಪಂದ ಮತ್ತು ನಿಯಮಗಳಿಗೆ ಬದ್ಧವಾಗಿದೆ. ಕಂಪನಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳುಲು ಸ್ಪರ್ಧಾತ್ಮಕವಲ್ಲದ ಷರತ್ತುಗಳನ್ನು ಬಳಸುತ್ತದೆ ಎಂದು ಪರೋಕ್ಷವಾಗಿ ಈ ಹೊಸ ನಿಯಮದ ಬಗ್ಗೆ ಒಪ್ಪಿಕೊಂಡಿದೆ. ಇದೀಗ ಈ ಹೊಸ ನಿಯಮದ ಬಗ್ಗೆ ಉದ್ಯೋಗ ಕ್ಷೇತ್ರಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.(ಏಜೆನ್ಸೀಸ್)