ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯೆ ಎಂ.ಕೆ.ವೀಣಾ ಸದ್ಭಾವನಾ ದಿನದ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಿದರು. 
ನ್ಯೂಸ್

ಸಹ್ಯಾದ್ರಿ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಶಿವಮೊಗ್ಗ: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್- ರೇಂಜರ್ಸ್, ರೆಡ್‌ಕ್ರಾಸ್ ಘಟಕಗಳ ಆಶ್ರಯದಲ್ಲಿ ಭಾನುವಾರ ಸದ್ಭಾವನಾ ದಿನ ಆಚರಿಸಲಾಯಿತು.

ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಡಾ. ಎಂ.ಕೆ.ವೀಣಾ, ನಾವಿಂದು ದೇಶದ ಸಮಗ್ರತೆ ಮತ್ತು ಐಕ್ಯತೆಯ ಬಗ್ಗೆ ಮಾತನಾಡಬೇಕಾಗಿದೆ. ಶಾಂತಿ ಮತ್ತು ಸೌಹಾರ್ದ ಪೂರ್ಣ ಸಂಬಂಧಗಳನ್ನು ನಮ್ಮ ನಿತ್ಯ ಜೀವನದಲ್ಲಿ ರೂಡಿಸಿಕೊಳ್ಳುವ ಮೂಲಕ ಪ್ರಬುದ್ಧ ನಾಗರಿಕರಾಗಿ ಈ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು. ಉಪನ್ಯಾಸಕ ಡಾ. ಕುಂದನ್ ಬಸವರಾಜ್ ಮತ್ತು ಕಾರ್ಯಕ್ರಮಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿದರು. ಡಾ. ಮಂಜುನಾಥ ಲೋಹಾರ್, ಡಾ. ಕೆ.ಎಸ್.ಸರಳ, ಡಾ. ಎಸ್.ಎಂ.ಮಮತಾ, ಡಾ. ಕೆ.ವಿ.ಗಿರಿಧರ್, ಪ್ರತಿಮಾ, ಹರೀಶ್, ನಿಂಗಣ್ಣ, ಎಂ.ಪರಶುರಾಮ್ ಉಪಸ್ಥಿತರಿದ್ದರು. ಸದ್ಭಾವನಾ ದಿನದ ಸ್ಮರಣಾರ್ಥ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.