ನ್ಯೂಸ್

ಪಡಿತರ ಅಕ್ಕಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ವಶ

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯ ಬಳಿ ಪಡಿತರ ಅಕ್ಕಿ ತುಂಬಿದ್ದ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.

ಪಟ್ಟಣದ ನಾಯಕರ ಬೀದಿಯ ಗೂಡ್ಸ್ ವಾಹನ ಚಾಲಕ ಈಶ್ವರ ಬಂಧಿತ. ದಾಳಿಯಲ್ಲಿ 76 ಚೀಲದಲ್ಲಿದ್ದ 3.5 ಟನ್ ತೂಕಕ್ಕೂ ಹೆಚ್ಚು ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಕಾವೇರಿ ರಸ್ತೆಯ ಬಳಿ ಅಕ್ರಮ ಪಡಿತರ ತುಂಬಿದ್ದ ಗೂಡ್ಸ್ ವಾಹನ ನಿಂತಿರುವ ಮಾ ಹಿತಿ ಮೇರೆಗೆ ಎಎಸ್‌ಐ ಶಂಕರರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಲು ಸಮೇತ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆಹಾರ ಇಲಾಖೆ ನಿರೀಕ್ಷಕ ಎನ್.ಎಂ.ಪ್ರಸಾದ್ ಜತೆ ಹೆಡ್ ಕಾನ್‌ಸ್ಟೇಬಲ್ ಸತೀಶ್‌ಚಂದ್ರ, ಸೂರ್ಯಪ್ರಕಾಶ್, ಸಿಬ್ಬಂದಿ ರಾಜು ಮಹಜರ್ ಪ್ರಕ್ರಿಯೆ ನಡೆಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.