ನ್ಯೂಸ್

ವಿದ್ಯಾರ್ಥಿಗಳ ಬಾಲ್ಯದ ನೆಚ್ಚಿನ ಗೆಳೆಯ ’ರೆನಾಲ್ಡ್ಸ್‘ ಇನ್ಮುಂದೆ ಸಿಗಲ್ಲ!

ಬೆಂಗಳೂರು: ಜಗತ್ತು ಪರಿವರ್ತನೆಯಾಗುತ್ತಿದೆ. ಕಾಲಕ್ಕೆ ತಕ್ಕಂತೆ ಟ್ರೆಂಡ್​, ತಂತ್ರಜ್ಞಾನಕ್ಕೆ ನಾವು ಬದಲಾಗುತ್ತಾ ಜೀವನವನ್ನು ನಡೆಸುತ್ತೇವೆ. ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೊಸಹೊಸ ವಸ್ತುಗಳು ಲಗ್ಗೆ ಇಟ್ಟು ಹಳೆಯ ನೆನಪು ಮಾಸಿ ಹೋಗುವಂತಾಗಿದೆ. ಹೀಗೆ ವಿದ್ಯಾರ್ಥಿಗಳ ಹಾಗೂ ನೌಕರರ ಜತೆ ಬಾಂಧವ್ಯ ಹೊಂದಿದ್ದ ರೆನಾಲ್ಡ್ಸ್ ಪೆನ್ನು ಮಾರುಕಟ್ಟೆಯಿಂದ ಕಣ್ಮರೆಯಾಗುತ್ತಿವೆ.

ಬಾಲ್ಯದ ನೆನಪುಗಳಲ್ಲಿ ಬಳಪ, ಮರಕೋತಿ ಆಟ,  ಮಿಠಾಯಿ, ಹುಳಿ ಚಾಕ್ಲೇಟ್​​ ಯಾವತ್ತು ಕೂಡಾ ನೆನಪಿನಲ್ಲಿರುವ ಖುಷಿಯ ಸಂಗತಿಗಳು. ಬಾಲ್ಯದ ನೆನಪುಗಳಲ್ಲಿ ಈ ರೆನಾಲ್ಡ್ಸ್ ಪೆನ್‌ ಕೂಡ ಒಂದು. ನೀಲಿ ಕ್ಯಾಪಿನ ಬಿಳಿ ಬಣ್ಣದ ಈ ಪೆನ್‌ ಯಾರು ಮರೆಯುವಂತೆಯೇ ಇಲ್ಲ. ಆದ್ರೆ ಈಗ ಈ ಪೆನ್ನುಗಳು ಮಾರುಕಟ್ಟೆಯಲ್ಲೇ ಇಲ್ಲದಂತಾಗಿದೆ.

ರೆನಾಲ್ಡ್ಸ್ ಪೆನ್ನುಗಳು ಭಾರತೀಯ ಬ್ರಾಂಡ್ ಮತ್ತು ಬರವಣಿಗೆ ಉಪಕರಣಗಳ ಮಾಜಿ ಅಮೆರಿಕನ್ ಉತ್ಪಾದನಾ ಕಂಪನಿಯಾಗಿದೆ, ಮುಖ್ಯವಾಗಿ ಪೆನ್ನುಗಳು. ರೆನಾಲ್ಡ್ಸ್ ಹೆಸರಿನಡಿಯಲ್ಲಿ ವಾಣಿಜ್ಯೀಕರಣಗೊಂಡ ಉತ್ಪನ್ನಗಳಲ್ಲಿ ಬಾಲ್ ಪಾಯಿಂಟ್, ಜೆಲ್, ರೋಲರ್‌ಬಾಲ್ ಮತ್ತು ಫೌಂಟೇನ್ ಪೆನ್ನುಗಳು ಮತ್ತು ಯಾಂತ್ರಿಕ ಪೆನ್ಸಿಲ್‌ಗಳು ಸೇರಿದ್ದವು. 1945 ರಿಂದ ದಶಕಗಳ ಕಾಲ ಆಳ್ವಿಕೆ ನಡೆಸಿತ್ತು ಈ ಪೆನ್.‌ ಭಾರತಕ್ಕೆ ಪರಿಚಯವಾದ ನಂತರ ಈ ಪೆನ್‌ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು. ಬಾಟಾದಂತೆಯೇ, ರೆನಾಲ್ಡ್ಸ್ ಭಾರತದಲ್ಲಿ ಆರಂಭವಾಗದಿದ್ದರೂ, ಯುಎಸ್‌ಕ್ಕಿಂತ ಇಲ್ಲಿ ಈ ಪೆನ್‌ಗಳು ಹೆಚ್ಚಿನ ಮಾರಾಟ ಪಡೆದುಕೊಂಡಿದ್ದವು. ದಶಕಗಳ ಕಾಲ ರೆನಾಲ್ಡ್ಸ್ ಪೆನ್ನುಗಳು ಭಾರತೀಯ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯ ಭಾಗವಾಗಿತ್ತು.

ರೆನಾಲ್ಡ್ಸ್ ಪೆನ್ನುಗಳಿಗೆ  ಪಾರ್ಕರ್, ಪೈಲಟ್ ಮತ್ತು ಮಿತ್ಸುಬಿಷಿ ಸೇರಿದಂತೆ ಸುಮಾರು ಪೆನ್ನುಗಳು ಪ್ರತಿಸ್ಪರ್ಧಿಗಳಿದ್ದವು. ಆದರೆ ಜೇಬುಗಳಲ್ಲಿ ಇಟ್ಟುಕೊಂಡಾಗ ಈ ಪೆನ್‌ಗಳು ಸೋರಿಕೆಯಾಗಿ ಬಟ್ಟೆ, ಬ್ಯಾಗ್‌ ಎಲ್ಲವೂ ನೀಲಿ ಆಗುತ್ತಿದ್ದವು ಮತ್ತು ಬೆಲೆ ವಿಚಾರವಾಗಿ ದುಬಾರಿ ಕೂಡ ಆಗಿದ್ದವು. ಆದರೆ ರೆನಾಲ್ಡ್ಸ್ ಪೆನ್ನುಗಳಲ್ಲಿ ಈ ದೂರುಗಳೇ ಇರಲಿಲ್ಲ.

ತರಗತಿಯ ಟಿಪ್ಪಣಿಗಳು, ಹೋಮ್‌ವರ್ಕ್, ಅಸೈನ್‌ಮೆಂಟ್‌ಗಳು ಬರೆಯುತ್ತಿದ್ದೇವು. ಆದರೆ ಇಂದು Word, Docs ಮತ್ತು PDF ಬಂದಮೇಲೆ ಪೆನ್‌ ಹಿಡಿದು ಬರೆಯುವರ ಸಂಖ್ಯೆಯೇ ಕಡಿಮೆ ಆಗಿ ಬಿಟ್ಟಿದೆ. ಅಂತಹದರಲ್ಲಿ ಹೊಸ ಹೊಸ ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಬರುವುದು ಮರಿಚಿಕೆಯಾಗಿದೆ. ಹೀಗೆ ತೊಂಬತ್ತರ ದಶಕದಿಂದ ಎಲ್ಲರ ಪ್ರಿಯವಾಗಿದ್ದ ರೆನಾಲ್ಡ್ಸ್ ಪೆನ್ನುಗಳು ನಿಧಾನವಾಗಿ ಅಳಿಯುತ್ತಾ ಬಂದವು, ಪ್ರಸ್ತುತ ರೆನಾಲ್ಡ್ಸ್ ಪೆನ್ನುಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಐಕಾನಿಕ್ ರೆನಾಲ್ಡ್ಸ್ ಪೆನ್‌ನ ಕೊನೆಯ ಕೆಲವು ಬ್ಯಾಚ್‌ಗಳು ಅಮೆಜಾನ್‌ನಲ್ಲಿ ಲಭ್ಯವಿವೆ.