ಶಿವಮೊಗ್ಗದ ಆರ್ಯ ಪಿಯು ಸೈನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಉದ್ಘಾಟಿಸಿದರು. ಡಾ. ವಿಜಯ್ಕುಮಾರ್, ಎನ್.ರಮೇಶ್, ನವೀನ್‌ಕುಮಾರ್, ಮೋನಿಶಾ ಇತರರಿದ್ದರು. 
ನ್ಯೂಸ್

ಪರಿಶ್ರಮದಿಂದ ಉತ್ತಮ ಫಲಿತಾಂಶ

ಶಿವಕುಮಾರ ಎಸ್.ಪಿ.

ಶಿವಮೊಗ್ಗ: ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮದಿಂದ ಮನಸ್ಸು ಮಾಡಿ ಓದಬೇಕು. ಇದರ ಫಲಿತಾಂಶ ನಿಮಗೇ ಗೊತ್ತಾಗುತ್ತದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಹೇಳಿದರು.

ಸವಳಂಗ ರಸ್ತೆಯಲ್ಲಿರುವ ಆರ್ಯ ಪಿಯು ಸೈನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಳವಾದ ಅಧ್ಯಯನ, ಏಕಾಗ್ರತೆ, ದೃಢ ವಿಶ್ವಾಸ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು

ಪಿಯು ಶಿಕ್ಷಣ ಹಂತ ವಿದ್ಯಾರ್ಥಿ ಜೀವನದ ಬಹುಮುಖ್ಯ ಭಾಗ. ಹಲವು ಗುರಿಗಳು ಇರುತ್ತವೆ. ಇವುಗಳನ್ನು ತಲುಪಲು ವಿದ್ಯಾರ್ಥಿಗಳು ಕಷ್ಟಪಡಲೇಬೇಕು. ವೈದ್ಯಕೀಯ ಸೀಟು ಪಡೆಯಲು ಬಹಳಷ್ಟು ಆಕಾಂಕ್ಷಿಗಳು ಇರುತ್ತಾರೆ. ಆದರೆ ಎಲ್ಲರಿಗೂ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಇತರೆ ಮೆಡಿಕಲ್ ವಿಭಾಗದ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕು ಎಂದರು.

ಜೆಎನ್‌ಎನ್‌ಸಿಇ ಪ್ರಾಚಾರ್ಯ ಡಾ. ವಿಜಯ್ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳ ವಿದಾಭ್ಯಾಸ ಮತ್ತು ಪಾಲಕರ ಮೇಲಿರುವ ಜವಾಬ್ದಾರಿಗಳನ್ನು ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸೌಲಭ್ಯ ಮತ್ತು ಅಪಾರ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಉತ್ತಮ ಜೀವನಶೈಲಿ ಜತೆಗೆ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್, ಆರ್ಯ ಪಿಯು ಕಾಲೇಜಿನ ಪ್ರಾಚಾರ್ಯ ನವೀನ್‌ಕುಮಾರ್, ಉಪನ್ಯಾಸಕ ಡಾ. ಕೃಪಾಕರ್, ಸಂಸ್ಥೆಯ ಮೋನಿಶಾ ರಮೇಶ್ ಇದ್ದರು.