ಬೆಂಗಳೂರು: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿ ವಿವಿಧ ಎಂಟು ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅ.9ರಿಂದ ಅ.31ರ ರವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ನ.1 ಕೊನೆಯ ದಿನವಾಗಿದೆ. ಸರ್ಕಾರವು ವಯೋಮಿತಿಯನ್ನು ಸಡಿಲಿಸಿರುವಂತೆ ಸಾಮಾನ್ಯ ವರ್ಗಕ್ಕೆ 38, ಒಬಿಸಿ 31 ಮತ್ತು ಪರಿಶಿಷ್ಟ ಜಾತಿ/ಪಂಗಡಕ್ಕೆ 43 ವರ್ಷಗಳ ನಿಗದಿ ಮಾಡಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಲಾಗುತ್ತದೆ. ಒಎಂಆರ್ ಆಧಾರಿತ ಪರೀಕ್ಷೆ ನಡೆಯಲಿದೆ. ಋಣಾತ್ಮಕ ಮೌಲ್ಯಮಾಪನ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದರಷ್ಟು (1/4) ಅಂಕ ಕಡಿತ ಮಾಡಲಾಗುತ್ತದೆ.
ಒಂದೇ ಪಠ್ಯಕ್ರಮ ಇರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿ ನೀಡಲಾಗುವುದು. ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು. ಆಸಕ್ತರು ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ http://cetonline.Karnataka.gov.in/kea/ ಭೇಟಿ ನೀಡಬಹುದು.
ಒನ್ ಟೈಮ್ ನೋಂದಣಿ:
ಹಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸುವವರಿದ್ದಾರೆ. ಹೀಗಾಗಿ, ಡಿಜಿಟಲ್ ಲಾಕರ್ ಆೃಪ್ ಮೂಲಕ ಆಧಾರ್ ಆಧಾರಿತ ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ. ಒಂದೇ ಅರ್ಜಿಯಲ್ಲಿ ವಿವಿಧ ಇಲಾಖೆಗಳ ಪರೀಕ್ಷೆಗಳನ್ನು ಟಿಕ್ ಮಾಡಿ ಶುಲ್ಕ ಪಾವತಿಸಬಹುದು.
ಇಲಾಖೆ ವಾರು ಹುದ್ದೆಗಳು
ಇಲಾಖೆ ಇತರೆ ಜಿಲ್ಲೆ ಕಲ್ಯಾಣ ಕರ್ನಾಟಕ
ಬಿಡಿಎ 18 07
ಸೋಪ್ಸ್ ಆೃಂಡ್ ಡಿಟರ್ಜೆಂಟ್ 64 14
ಆರೋಗ್ಯ ವಿವಿ 40 04
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ 63 253
ವಾಯುವ್ಯ ಕರ್ನಾಟಕ ಸಾರಿಗೆ 19 -
ಕೃಷಿ ಮಾರಾಟ ಇಲಾಖೆ 180
ತಾಂತ್ರಿಕ ಶಿಕ್ಷಣ 50 43
ಶಾಲಾ ಶಿಕ್ಷಣ (ಪಿಯು) 10