ನ್ಯೂಸ್

ಚಿನ್ನ ಕೊಳ್ಳುವವರಿಗೆ ಗುಡ್​ನ್ಯೂಸ್​..! ಕೊಂಚ ಇಳಿಕೆ ಕಂಡ ಚಿನ್ನದ ಬೆಲೆ: ಇಂದಿನ ದರ ಎಷ್ಟಿದೆ ಗೊತ್ತಾ! | Today Gold Rate

Today Gold Rate : ಕಳೆದ ಕೆಲವು ವರ್ಷಗಳಿಂದ ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿದ್ದು, ಮಧ್ಯಮ ವರ್ಗದವರ ಕೈಗೆ ಎಟುಕದಂತಾಗಿದೆ. ಬೆಲೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿರುವ ಹಳದಿ ಲೋಹ, ಪ್ರಸ್ತುತ ಭಾರೀ ಇಳಿಕೆ ಕಾಣುತ್ತಿರುವುದು ಸಿಹಿ ಸುದ್ದಿಯಾಗಿದೆ.

ಭಾರತದಲ್ಲಿ ಚಿನ್ನಕ್ಕೆ ಯಾವಾಗಲೂ ಒಂದು ವಿಶೇಷ ಸ್ಥಾನವಿದೆ. ಹಬ್ಬಗಳು, ಮದುವೆ ಸಮಾರಂಭಗಳು ಸೇರಿದಂತೆ ಇನ್ನಿತರ ಆಚರಣೆಗಳು ಮತ್ತು ಶುಭ ಸಂದರ್ಭಗಳಲ್ಲಿ ಮಹಿಳೆಯರು ವಿಶೇಷವಾಗಿ ಚಿನ್ನ ಖರೀದಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದಾಗ್ಯೂ, ಹಿಂದಿನ ದಿನದವರೆಗೂ ನಿರಂತರವಾಗಿ ಏರುತ್ತಿದ್ದ ಚಿನ್ನದ ದರಗಳು ಇಂದು ಇದ್ದಕ್ಕಿದ್ದಂತೆ ಕುಸಿದವು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ತೀವ್ರವಾಗಿ ಕುಸಿದಂತೆ, ದೇಶೀಯವಾಗಿಯೂ ಇದರ ಪರಿಣಾಮ ಬೀರಿದೆ. ಇದರೊಂದಿಗೆ, ಚಿನ್ನದ ದರವು ಕಡಿಮೆಯಾಗಿದೆ. ಚಿನ್ನ ಪ್ರಿಯರಿಗೆ ಇದು ಒಳ್ಳೆಯ ಅವಕಾಶ. ಈ ಕ್ರಮದಲ್ಲಿ, ಜೂನ್ 8 ರಂದು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳೋಣ.

ಬೆಂಗಳೂರಿನಲ್ಲಿ ಇಳಿಯದ ಚಿನ್ನ ರೇಟು?

ಚಿನ್ನದ ಬೆಲೆಗಳು ಶುಕ್ರವಾರ (ಜೂನ್ 6, 2025) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಠಾತ್ತನೆ ಕುಸಿದವು.ಹೀಗಾಗಿ, ದೇಶದ ಬಹುತೇಕ ನಗರಗಳಲ್ಲಿ ಕಳೆದ ದಿನಗಳಿಂದ ಚಿನ್ನದ ದರ ಇಳಿಮುಖದಲ್ಲಿದೆ. ಆದಾಗ್ಯೂ ಜೂ.8ರ ಪ್ರಕಾರ ಬೆಂಗಳೂರಿನಲ್ಲಿ ಚಿನ್ನದ ದರ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,797 ಇದ್ದು, 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 8,980 ರೂ. ಇದೆ. ಅಲ್ಲದೆ, 18 ಕ್ಯಾರೆಟ್ ಚಿನ್ನಕ್ಕೆ (999 ಚಿನ್ನ ಎಂದೂ ಕರೆಯುತ್ತಾರೆ) ಪ್ರತಿ ಗ್ರಾಂಗೆ 7,348 ರೂ.ಆಗಿದೆ. ಅಂದರೆ 10ಗ್ರಾಂ(24 ಕ್ಯಾರೆಟ್) ಚಿನ್ನಕ್ಕೆ 97,970 ರೂ., 10ಗ್ರಾಂ(22 ಕ್ಯಾರೆಟ್)​​ 89,800 ಹಾಗೂ 10ಗ್ರಾಂ (18 ಕ್ಯಾರೆಟ್​​) 73,480 ರೂ. ಇದೆ.

ದೆಹಲಿಯಲ್ಲಿ ಚಿನ್ನದ ಬೆಲೆ ಕುಸಿತ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 1,500 ರೂಪಾಯಿ ಇಳಿಕೆಗೊಂಡು 89,950 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 1,630 ರೂಪಾಯಿ ಕುಸಿದು 98,120 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಹೆಚ್ಚಾಗಿ 1,07,100 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.

ಸ್ಥಿರ ಬೆಳ್ಳಿ ಬೆಲೆ

ಚಿನ್ನದ ಬೆಲೆ ಗಣನೀಯವಾಗಿ ಇಳಿದು ಸಮಾಧಾನ ತಂದಿದ್ದರೂ, ಬೆಳ್ಳಿ ಇನ್ನೂ ಗರಿಷ್ಠ ಮಟ್ಟದಲ್ಲಿಯೇ ಇದೆ. ಇತ್ತೀಚೆಗೆ ಗಮನಾರ್ಹವಾಗಿ ಏರಿಕೆಯಾಗಿ ಪ್ರತಿ ಕೆಜಿಗೆ 1,18,000 ರೂ. ತಲುಪಿದ್ದ ಬೆಳ್ಳಿಯ ಬೆಲೆ ಇಂದು ಅದೇ ಬೆಲೆಯಲ್ಲಿ ಮುಂದುವರೆದಿದೆ. ಯಾವುದೇ ಬದಲಾವಣೆ ಇಲ್ಲ.(ಏಜೆನ್ಸೀಸ್​)