LPG cylinder price:ಇನ್ನು ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡನೆಯಾಗಿದ್ದು, ಅದಕ್ಕೂ ಮೊದಲು ವಾಣಿಜ್ಯ ವಲಯದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಹೌದು, ಇದೇ ಫೆ.1ರ ಶನಿವಾರ ಮಧ್ಯರಾತ್ರಿಯಿಂದ ಗ್ಯಾಸ್ ಸಿಲಿಂಡರ್ ಬೆಲೆ ಅಗ್ಗವಾಗಲಿದೆ. ಎಲ್‌ಪಿಜಿ ದರ ಇಳಿಕೆಯಾಗಿದ್ದು, ನಾಳೆಯಿಂದ ಕಡಿಮೆ ದರದಲ್ಲಿ ಸಿಲಿಂಡರ್ ಕೊಳ್ಳಬಹುದು. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 7 ರೂಪಾಯಿ ಕಡಿತಗೊಳಿಸಿವೆ ಎಂದು ವರದಿಯಾಗಿದೆ. ಹೀಗಾಗಿ, ನಿಮ್ಮ ನಗರದಲ್ಲೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಗ್ಗವಾಗಲಿದೆ.
ದೆಹಲಿ: 1804 ರೂ.ನಿಂದ 1,797 ರೂ.ಗೆ ಇಳಿಕೆ ಅದರಂತೆ, ಮುಂಬೈ: 1,756 ರೂ.ನಿಂದ 1,749.50 ರೂ.ಗೆ ಇಳಿಕೆಯಾಗಿದೆ. ಬೆಂಗಳೂರು:1,880 ರೂ.ನಿಂದ 1,870 ರೂ.ಗೆ, ಕೋಲ್ಕತ್ತಾ: 1,911 ರೂ.ನಿಂದ 1,907 ರೂ.ಗೆ, ಚೆನ್ನೈ: 1959.50 ರೂ.ಗೆ ಇಳಿಕೆಯಾಗಿದೆ ಎಂದು ವರದಿ ಉಲ್ಲೇಖವಾಗಿದೆ.
ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಇದರ ಆಧಾರದ ಮೇಲೆ, 19 ಕೆಜಿ ಎಲ್‌ಪಿಜಿ ಸಿಲಿಂಡರ್ ಅಥವಾ 14 ಕೆಜಿ ಸಾಮಾನ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಬದಲಾಯಿಸಲಾಗುತ್ತದೆ. ಆದಾಗ್ಯೂ, ದೀರ್ಘಕಾಲದವರೆಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.(ಏಜೆನ್ಸೀಸ್)