ಮೂಡಿಗೆರೆ: ಮನುಷ್ಯನ ಬುದ್ಧಿವಂತಿಕೆಯನ್ನು ಜಗತ್ತಿಗೆ ತೋರಿಸಿಕೊಡಲು ಚೆಸ್ ಕ್ರೀಡೆ ಸಹಕಾರಿ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಡಿಸ್ಟ್ರಿಕ್ ಚೆಸ್ ಅಸೋಸಿಯೇಷನ್‌ನಿಂದ ಶನಿವಾರ ಪಟ್ಟಣದ ಬಿಜಿಎಸ್ ಒಕ್ಕಲಿಗರ ಸಂಘದ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಆಟವನ್ನು ವಯಸ್ಸಿನ ಮಿತಿ ಇಲ್ಲದಂತೆ ಎಲ್ಲರೂ ಆಡಬಹುದಾಗಿದೆ. ಎಲ್ಲ ಶಾಲೆಯಲ್ಲಿ ಮಕ್ಕಳಿಗೆ ಚೆಸ್ ತರಬೇತಿ ನೀಡಬೇಕು. ಮಕ್ಕಳು ಮೊಬೈಲ್ ಆಕರ್ಷಣೆ ಒಳಗಾಗಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಹಿಂದೆ ಕಬಡ್ಡಿ, ಖೋಖೋ, ಲಗೋರಿ, ಮರಕೋತಿ, ಚಿನ್ನಿದಾಂಡು ಹೀಗೆ ದೈಹಿಕ ದಂಡನೆಯ ಆಟದಲ್ಲಿ ಮಕ್ಕಳು ತೊಡಗಿಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಎಲ್ಲವೂ ಮರೆಯಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಎಲ್ಲರೂ ಮಾರುಹೋಗಿದ್ದಾರೆ. ಮನುಷ್ಯನಿಗೆ ಹಿಂದಿನ ಕಾಲದಲ್ಲಿದ್ದ ಆರೋಗ್ಯ ಈಗ ಇಲ್ಲ. ಎಲ್ಲರೂ ಆಸ್ಪತ್ರೆಯ ಮೊರೆ ಹೋಗಿ ಔಷಧವನ್ನು ನಿತ್ಯ ಸೇವಿಸಬೇಕಾಗಿರುವುದು ಕಳವಳ ಉಂಟು ಮಾಡುತ್ತಿದೆ ಎಂದು ಹೇಳಿದರು.
ಡಿಸ್ಟ್ರಿಕ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ನಯನ ತಳವಾರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎನ್.ಎಲ್.ಪುಣ್ಯಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಕೆ.ಸಿ.ರತನ್, ಬಿಜಿಎಸ್‌ವಿಎಸ್ ಕಾಲೇಜು ಪ್ರಾಚಾರ್ಯ ಎಂ.ಆರ್.ಸಂದೇಶ್, ಶಾಲೆ ಪ್ರಾಚಾರ್ಯ ರಮೇಶ್ ರಾಮಕೃಷ್ಣ, ಮುಖಂಡರಾದ ಎಂ.ಸಿ.ಹೂವಪ್ಪ, ಪರೀಕ್ಷಿತ್ ಜಾವಳಿ, ಗಿರೀಶ್, ಪ್ರಸನ್ನ ಗೌಡಳ್ಳಿ, ಅಮರನಾಥ್, ಸುಧೀರ್ ಕಡಿದಾಳು, ಪ್ರಸನ್ನ ತಳವಾರ, ಶಿವಕಾಶಿ, ಉಮಾಶಂಕರ್, ಪ್ರಸನ್ನ ಕುಮಾರ್ ಇತರರಿದ್ದರು.